ಲಂಡನ್ : ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ‘ಸರ್ಕಾರದ ಆರ್ಥಿಕ ಬೆಂಬಲವುಳ್ಳ ಮಾಧ್ಯಮ’ ಎಂದು ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ ಲೇಬಲ್ ಮಾಡಿರುವುದಕ್ಕೆ ಬಿಬಿಸಿ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.
‘ಶೀಘ್ರ ಈ ಲೇಬಲ್ ತೆಗೆದುಹಾಕಲು ಟ್ವಿಟರ್ ಸಂಸ್ಥೆಯ ಆಡಳಿತ ವರ್ಗವನ್ನು ಸಂಪರ್ಕಿಸಲಾಗಿದೆ’ ಎಂದು ಬ್ರಿಟನ್ ಮಾಧ್ಯಮ ಕಾರ್ಪೊರೇಷನ್ ತಿಳಿಸಿದೆ.
‘ಬಿಬಿಸಿ ಪ್ರಸ್ತುತ ಮತ್ತು ಎಂದೆಂದಿಗೂ ಸ್ವತಂತ್ರ ಸಂಸ್ಥೆ. ಪರವಾನಗಿ ಶುಲ್ಕದ ರೂಪದಲ್ಲಿ ಬ್ರಿಟಿಷ್ ಪ್ರಜೆಗಳೇ ಸಂಸ್ಥೆಗೆ ಆರ್ಥಿಕ ನೆರವು ಒದಗಿಸುತ್ತಿದ್ದಾರೆ’ ಎಂದು ಹೇಳಿಕೆಯಲ್ಲಿ ಬಿಬಿಸಿ ತಿಳಿಸಿದೆ.
‘ಗರಿಷ್ಠ ಪಾರದರ್ಶಕತೆ ಮತ್ತು ನಿಖರತೆ ಕಾಯ್ದುಕೊಳ್ಳಲು ಮಾಧ್ಯಮ ಸಂಸ್ಥೆಗಳ ‘ಅನುದಾನ ಮೂಲ’ ಬಹಿರಂಗಪಡಿಸುವುದು ಸೂಕ್ತ ಎಂದು ಭಾವಿಸುತ್ತೇವೆ’ ಎಂದು ಬಿಬಿಸಿಗೆ ಕಳುಹಿಸಿರುವ ಮೇಲ್‌ನಲ್ಲಿ ಎಲಾನ್ ಮಸ್ಕ್ ತಿಳಿಸಿದ್ದಾರೆ.