Mysore
23
broken clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಎಕ್ಸ್ ಪ್ರೆಸ್ ಹೈವೆ ಟೋಲ್‌ನಲ್ಲಿ ಶಾಸಕರಿಗೆ ಅವಾಜ್ ಹಾಕಿದ ಸಿಬ್ಬಂದಿ

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆಯ ರಾಮನಗರ ಟೋಲ್ ಪ್ಲಾಜಾದಲ್ಲಿ ಶಾಸಕರ ಜತೆ ದಶಪಥ ಟೋಲ್ ಸಿಬ್ಬಂದಿಗಳು ಜಗಳ ತೆಗೆದು ಗೂಂಡಾ ವರ್ತನೆ ತೋರಿದ್ದಾರೆ.

ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಜತೆ ಟೋಲ್ ಸಿಬ್ಬಂದಿ ವಾಗ್ವಾದ ಮಾಡಿದ್ದಾರೆ. ಕಳೆದ ಭಾನುವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಮಳವಳ್ಳಿ ಕಡೆ ಹೋಗುತ್ತಿದ್ದ ಶಾಸಕ ನರೇಂದ್ರಸ್ವಾಮಿ ಅವರನ್ನು ಕುಂಬಳಗೊಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾದಲ್ಲಿ ಶಾಸಕರ ಕಾರನ್ನು ತಡೆದಿದ್ದಾರೆ. ಶಾಸಕ ನರೇಂದ್ರಸ್ವಾಮಿ ಬಳಿ ವಾಹನ ಪಾಸ್ ಇದ್ದರೂ ತಡೆದು ಚೆಕ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ.

ಈ ವೇಳೆ ಪೋಲಿಸರು ಬರಲಿ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಾರೆ. `ಯಾವ ಪೊಲೀಸರು ಬೇಕಾದರೂ ಬರಲಿ, ನಾನು ನೋಡಿರದ ಪೋಲಿಸಾ’ ಎಂದು ಏಕವಚನದಲ್ಲೇ ಟೋಲ್ ಸಿಬ್ಬಂದಿ ಶಾಸಕರಿಗೆ ಅವಾಜ್ ಹಾಕಿದ್ದಾರೆ.
ನಿಮ್ಮನ್ನ ಹೈವೆಯಲ್ಲಿ ಬಿಟ್ಟಿಯಾಗಿ ಬಿಡ್ತಾ ಇದ್ದೀವಿ ಎಂದು ಶಾಸಕರಿಗೆ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ