Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಇನ್ನೂ ಹೆಚ್ಚಲಿದೆ ಬಿಸಿಲಿನ ಧಗೆ ಮುಂದಿನ 5 ದಿನಗಳಲ್ಲಿ ತಾಪಮಾನ 4 ಡಿಗ್ರಿಸೆಲ್ಸಿಯಸ್‌ ಏರಿಕೆ – ಹವಾಮಾನ ಇಲಾಖೆ

ಹೊಸದಿಲ್ಲಿ : ದೇಶದಲ್ಲಿ ಬಿಸಿಲಿನ ಬೇಗೆಗೆ ಜನ ತತ್ತರಿಸಿರುವ ಹೊತ್ತಲ್ಲೇ ಉಷ್ಣಾಂಶ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಹೊರ ಹಾಕಿದೆ.
ವಾಯವ್ಯ, ಪಶ್ಚಿಮ, ಪೂರ್ವ ಮತ್ತು ಕೇಂದ್ರ ಭಾರತ ಭಾಗದಲ್ಲಿ ತಾಪಮಾನ ಸುಮಾರು 4 ಡಿ.ಸೆ.ನಷ್ಟು ಏರಿಕೆಯಾಗಲಿದೆ. ಆದರೆ, ಐದು ದಿನಗಳಲ್ಲಿ ಯಾವುದೇ ಉಷ್ಣ ಮಾರುತದ ಸಾಧ್ಯತೆ ಇಲ್ಲಎಂದು ಶನಿವಾರ ಹೊರಡಿಸಿದ ಮಾರ್ಗಸೂಚಿಯಲ್ಲಿಇಲಾಖೆ ಹೇಳಿದೆ. ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್‌, ಪಂಜಾಬ್‌, ಮಹಾರಾಷ್ಟ್ರ, ಹರಿಯಾಣ, ಛತ್ತೀಸ್‌ಗಢದಲ್ಲಿಉಷ್ಣದ ತೀವ್ರತೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ತಾಪಮಾನ 4 ಡಿಗ್ರಿ ಹೆಚ್ಚಳ : ದೇಶದ ಹಲವು ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್‌ ಹೆಚ್ಚಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದೇ ವೇಳೆ ದೇಶದ ಕೆಲವು ಭಾಗಗಳಲ್ಲಿ ಭಾರೀ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗಲಿದೆ ಎಂದಿದ್ದಾರೆ.

ದಕ್ಷಿಣ ಕರ್ನಾಟಕದಲ್ಲಿ 35 ಡಿಗ್ರಿವರೆಗೂ ಹೆಚ್ಚಳ : ಈ ಬಾರಿ ಕರ್ನಾಟಕದಲ್ಲಿ ಬೇಸಿಗೆಯ ಉಷ್ಣಾಂಶ ದಿನದಿಂದ ದಿನಕ್ಕೆ ಏರುತ್ತಲೆ ಸಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯವಾಗಿ 28ರಿಂದ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಈ ಬಾರಿ ಉಷ್ಣಾಂಶ 35 ಡಿಗ್ರಿ ವರೆಗೂ ಏರಿಕೆಯಾಗುತ್ತಿದೆ. ಉತ್ತರ ಕರ್ನಾಟಕದ ಹಲವೆಡೆ ಈಗಾಗಲೇ ಉಷ್ಣಾಂಶ 38-39 ಡಿಗ್ರಿ ಸಮೀಪಿಸುತ್ತಿದೆ. ಇನ್ನು ಬೆಳಗ್ಗೆ 9 ಗಂಟೆ ವೇಳೆಗಾಗಲೇ ಬಿಸಲು ಮೈ ಸುಡುತ್ತದೆ. ಇನ್ನು ಮಧ್ಯಾಹ್ನ ಧಗೆ ತಾಳಲಾದರೆ ಜನರು ಕಂಗಾಲಾಗಿದ್ದಾರೆ. ತಂಪು ಪಾಲಿಯ, ಪ್ಯಾನ್‌ ಎಸಿ ಮೊರೆ ಹೋಗಿದ್ದಾರೆ.

ಹಲವೆಡೆ ಗುಡುಗು ಸಹಿತ ಮಳೆ : ಮುಂದಿನ ಎರಡು ದಿನಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರದಲ್ಲಿ ಗುಡುಗು, ಸಿಡಿಲು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಳೆಯ ಬಳಿಕ ಉಷ್ಣಾಂಶ ನಿಧಾನವಾಗಿ ಏರಿಕೆ ಕಾಣಲಿದೆ. ಜಾಗತಿಕವಾಗಿ ಬದಲಾಗಿರುವ ಹವಾಮಾನ ವೈಪರೀತ್ಯದಿಂದ ದೇಶದಲ್ಲಿಉಷ್ಣಾಂಶ ಏರಿಕೆ ಕಾಣುತ್ತಿದೆ. ದೇಶದಲ್ಲಿಪ್ರವಾಹ, ಬರಗಾಲದಂಥ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮಳೆ ಮೂರು ದಿನ ಮಳೆ : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾನುವಾರದಿಂದ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಕಲಬುರಗಿ, ಬೀದರ್‌ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿಒಣ ಹವೆ ಮುಂದುವರಿಯುವುದು ಎಂದು ಇಲಾಖೆ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ