Mysore
22
light rain
Light
Dark

ಆಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತಳಾಗಿದ್ದ ನಟಿ ಇಸ್ಲಾಂಗೆ ಮತಾಂತರವಾಗಿ ಮದುವೆ

ಮುಂಬೈ: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅವರ ಆಶ್ಲೀಲ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಗೆಹನಾ ವಸಿಷ್ಟ ಇಸ್ಲಾಂಗೆ ಮತಂತಾರವಾಗಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದಾರೆ.

ʼಬೆಹೆನೆನ್ʼ ,ʼಗಂಧಿ ಬಾತ್ʼ ನಲ್ಲಿ ನಟಿಸಿರುವ ಗೆಹನಾ ವಸಿಷ್ಟ ಕಿರುತೆರೆ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿದ್ದ ಬಳಿಕ ಇದೀಗ ಮದುವೆ ವಿಚಾರದಲ್ಲಿ ನಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ನಟಿಯ ಪ್ರಿಯಕರ ಫೈಜಾನ್ ಅನ್ಸಾರಿ ಸಾಮಾಜಿಕ ಜಾಲತಾಣದ ಮಾಧ್ಯಮದ ಪ್ರಭಾವಿಯಾಗಿದ್ದಾರೆ. ಇತ್ತೀಚೆಗೆ ಅಮೇಜಾನ್‌ ಮಿನಿಯಲ್ಲಿ ಬಂದ “ದಾಟೆಬಾಜಿ” ಶೋನಲ್ಲಿ ಫೈಜಾನ್ ಅನ್ಸಾರಿ ಕಾಣಿಸಿಕೊಂಡಿದ್ದರು.

ಗೆಹನಾ ವಸಿಷ್ಟ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ತನ್ನ ಪ್ರಿಯಕನೊಂದಿಗೆ ವಿವಾಹವಾಗಿದ್ದಾರೆ. ಆತ್ಮೀಯರ ಸಮ್ಮುಖದಲ್ಲಿ ನಿಕಾಹ್‌ ಸಮಾರಂಭ ನಡೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫೆಬ್ರವರಿ 3, 2021 ರಂದು ಮಾಲ್ವಾನಿ ಪೊಲೀಸರು ಬಂಗಲೆಯೊಂದರ ಮೇಲೆ ದಾಳಿ ನಡೆಸಿದ್ದರು.  ಅಲ್ಲಿ ಫಿಲ್ಮ್ಸ್‌ ಪ್ರೂಡಕ್ಷನ್‌ ವೊಂದರ ಬ್ಯಾನರ್‌ ಅಡಿಯಲ್ಲಿ ಕೆಲ ವ್ಯಕ್ತಿಗಳು ಆಶ್ಲೀಲ ಚಿತ್ರದ ನಿರ್ಮಾಣವನ್ನು ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಆ ವೇಳೆ ನಟಿ ಗೆಹನಾ ವಸಿಷ್ಟ ಇರಲಿಲ್ಲ. ಅವಳು ಆಶ್ಲೀಲ ಕಂಟೆಂಟ್‌ ಗಳನ್ನು ವಿವಿಧ ಪ್ರೂಡಕ್ಷನ್‌ ಸಂಸ್ಥೆ ಹಾಗೂ ಕೆಲ ಓಟಿಟಿ ಫ್ಲಾಟ್‌ ಫಾರ್ಮ್‌ ಗಳಿಗೆ ಮಾರಾಟ ಮಾಡುತ್ತಿದ್ದಳು ಎನ್ನುವ ಆರೋಪದ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆ ಬಳಿಕ ಆಕೆಗೆ ಜಾಮೀನು ನೀಡಲಾಗಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ