Mysore
29
few clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

Telangana Election Results 2023: ತೆಲಂಗಾಣ ಸಿಎಂ ರೇಸ್‌ನಲ್ಲಿರುವ ಅಭ್ಯರ್ಥಿಗಳು

ಇಂದು ( ಡಿಸೆಂಬರ್‌ 3 ) ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ ಮ್ಯಾಜಿಕ್ ನಂಬರ್‌ಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಇಡುತ್ತಿದೆ.

ತೆಲಂಗಾಣ ಕಾಂಗ್ರೆಸ್‌ನ ಅಧ್ಯಕ್ಷ ರೇವಂತ್‌ ರೆಡ್ಡಿ ಕಾಮರೆಡ್ಡಿ ಹಾಗೂ ಕೊಡಂಗಲ್‌ ಎರಡೂ ವಿಧಾನಸಭಾ ಕ್ಷೇತ್ರದಲ್ಲಿಯೂ ಮುನ್ನಡೆಯನ್ನು ಸಾಧಿಸಿದ್ದಾರೆ. ಈಗಾಗಲೇ ರೇವಂತ್‌ ರೆಡ್ಡಿ ರೋಡ್‌ ಶೋ ಸಹ ನಡೆದಿದ್ದು, ಇವರು ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಯಾಗಲು ರೇಸ್‌ನಲ್ಲಿರುವ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ..

* ರೇವಂತ್‌ ರೆಡ್ಡಿ – ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸಕ್ಸಸ್‌ಗೆ ಪ್ರಮುಖ ಕಾರಣರಾಗಿರುವ ರೇವಂತ್‌ ರೆಡ್ಡಿ ಸಿಎಂ ರೇಸ್‌ನಲ್ಲಿರುವ ಪ್ರಮುಖ ಅಭ್ಯರ್ಥಿ.
* ಮಲ್ಲು ಭಟ್ಟಿ ವಿಕ್ರಮಾರ್ಕ – ತೆಲಂಗಾಣ ವಿಧಾನಸಭೆಯ ದ್ವಿತೀಯ ವಿರೋಧಪಕ್ಷದ ನಾಯಕನಾಗಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ ಸಹ ಸಿಎಂ ರೇಸ್‌ನಲ್ಲಿದ್ದಾರೆ.
* ಕೊಮಟಿರೆಡ್ಡಿ ವೆಂಕಟರೆಡ್ಡಿ – ಭುವನಗಿರಿಯ ಎಂಪಿಯಾಗಿರುವ ಕೊಮಟಿರೆಡ್ಡಿ ಸಹ ಸಿಎಂ ರೇಸ್‌ನಲ್ಲಿರುವ ಅಭ್ಯರ್ಥಿ.
* ಪೊಂಗುಲೆಟಿ ಶ್ರೀನಿವಾಸ್‌ ರೆಡ್ಡಿ – ಈ ಹಿಂದೆ ಬಿಆರ್‌ಎಸ್‌ ಪಕ್ಷದಲ್ಲಿದ್ದು ಇದೇ ವರ್ಷ ಪಕ್ಷದ ವಿರುದ್ಧದ ಚಟುವಟಿಕೆಗಳಿಂದ ಅಮಾನತ್ತುಗೊಂಡಿದ್ದ ಇವರು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದ್ದು ಸಿಎಂ ಸ್ಥಾನದ ರೇಸ್‌ನಲ್ಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ