Mysore
25
overcast clouds

Social Media

ಬುಧವಾರ, 01 ಜುಲೈ 2026
Light
Dark

ಉಸ್ತುವಾರಿ ಸಚಿವರಾಗಿ ಎನ್.ಎಸ್ ಬೋಸರಾಜ್ ಅಚ್ಚರಿ ಆಯ್ಕೆ..!

ಚೆಟ್ಟಳ್ಳಿ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಮಾನ್ವಿ ವಿಧಾನಪರಿಷತ್ ಕ್ಷೇತ್ರದ ಮಾಜಿ ಸದಸ್ಯ, ಎನ್.ಎಸ್ ಬೋಸರಾಜ್ ಅವರನ್ನು ನೇಮಕ ಮಾಡಲಾಗಿದ್ದು, ಬೋಸರಾಜ್ ನೇಮಕ ಅಚ್ಚರಿಯನ್ನುಂಟುಮಾಡಿದೆ.
ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕೊಡಗು ಮೂಲದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಎಚ್.ಸಿ ಮಹದೇವಪ್ಪ, ಅಥವಾ ಇಂಧನ ಇಲಾಖೆ ಸಚಿವ ಕೊಡಗು ಮೂಲದ ಕೆ.ಜೆ ಜಾರ್ಜ್ ಹೆಗಲಿಗೆ ಕೊಡಗು ಉಸ್ತುವಾರಿ ನೀಡಬಹುದೆಂದು ಊಹಿಸಲಾಗಿತ್ತು. ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲೆಗೆ ಅಚ್ಚರಿಯ ಆಯ್ಕೆ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!