Mysore
26
overcast clouds

Social Media

ಶುಕ್ರವಾರ, 11 ಸೆಪ್ಟೆಂಬರ್ 2026
Light
Dark

ಕೂಡ್ಲಿಗಿಯಲ್ಲಿ ಬಿಸಿಲಿನ ಝಳಕ್ಕೆ ಕುಸಿದು ಬಿದ್ದ ಸಿದ್ದರಾಮಯ್ಯ

ವಿಜಯನಗರ : ಸಿದ್ದರಾಮಯ್ಯ ಇಂದು ಕೂಡ್ಲಿಗಿ, ಹರಪನಹಳ್ಳಿ, ಹಗರಿಬೊಮ್ಮನ ಹಳ್ಳಿ, ಹೊಸಪೇಟೆ ವಿಧಾನ ಸಭೆ ಕ್ಷೇತ್ರಗಳಲ್ಲಿ ಮತಯಾಚನೆಗೆ ತೆರಳಿದ್ದು ಈ ಸಂದರ್ಭ ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿದ್ದಾರೆ.

ಬೆಳಗ್ಗೆ ಕೂಡ್ಲಿಗಿ, ಮಧ್ಯಾನ ಹರಪನಹಳ್ಳಿ, ಸಂಜೆ ನಾಲ್ಕು ಗಂಟೆಗೆ ಹಗರಿಬೊಮ್ಮನ ಹಳ್ಳಿ, ರಾತ್ರಿ 7 ಕ್ಕೆ ಹೊಸಪೇಟೆಯಲ್ಲಿ ಅದ್ದೂರಿ ಪ್ರಚಾರ ಸಿದ್ದರಾಮಯ್ಯ ನಡೆಸಲಿದ್ದರು. ಈ ಹಿನ್ನೆಲೆಯಲ್ಲಿ ಕೂಡ್ಲಿಗಿಗೆ ಸಿದ್ದರಾಮಯ್ಯ ಬಳ್ಳಾರಿ ರಸ್ತೆಯಲ್ಲಿರೋ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಮಾಜಿ ಸಿದ್ದರಾಮಯ್ಯ ಬಂದಿಳಿದಿದ್ದರು.

ಕೂಡ್ಲಿಗಿಯಲ್ಲಿ ಬಿಸಿಲಿನ ತಾಪಕ್ಕೆ ಕ್ಷಣಮಾತ್ರದಲ್ಲಿ ಸಿದ್ದರಾಮಯ್ಯ ಕುಸಿದು ಬಿದ್ದಿದ್ದಾರೆ. ಕೂಡ್ಲಿಗಿಯ ಹೆಲಿಪ್ಯಾಡ್ ಬಳಿ ಕಾರಿನ ಬಾಗಿಲಿನ ಬಳಿ ಏಕಾಏಕಿ ಸಿದ್ದರಾಮಯ್ಯ ಕುಸಿದು ಬೀಳುತ್ತಿದ್ದಂತೆಯೇ ಕೈ ಹಿಡಿದ ವೈದ್ಯ ಗ್ಲೂಕೋಸ್, ನೀರು ಕುಡಿಸಿದ್ದಾರೆ. ಅಭ್ಯರ್ಥಿ ಡಾ.ಶ್ರೀನಿವಾಸ್ ಈಗ ಸಿದ್ದರಾಮಯ್ಯರ ಆರೈಕೆ ಮಾಡುತ್ತಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!