‘ಸ್ಕ್ಯಾಂಡಿನೇವಿಯಾದಲ್ಲಿ 6,000 ವರ್ಷಗಳಷ್ಟು ಹಳೆಯದಾದ ಚ್ಯೂಯಿಂಗ್ ಗಮ್ (Chewing Gum) ಪತ್ತೆಯಾಗಿದೆ. ಇಷ್ಟೇ ಅಲ್ಲ ಇದನ್ನು ಜಗಿದವರ ಡಿಎನ್ಎ (DNA)ಯನ್ನು ಕೂಡ ಇದು ಸಂರಕ್ಷಿಸಿಟ್ಟುಕೊಂಡಿದೆ. ಈ ಚ್ಯೂಯಿಂಗ್ ಗಮ್ ಅನ್ನು ಜಗಿದವಳು ಬೇಟೆಗಾರರ ಪುಟ್ಟ ಹುಡುಗಿ, ಈಕೆ ಕಪ್ಪು ಚರ್ಮ, ಕಂದು ಕೂದಲು ಮತ್ತು ನೀಲಿ ಕಣ್ಣುಗಳನ್ನು ಹೊಂದಿದ್ದಳು. ಈ ಚ್ಯೂಯಿಂಗ್ಗಿಂತ ಮೊದಲು ಈಕೆ ಹಝಲ್ನಟ್ ಮತ್ತು ಬಾತುಕೋಳಿಯನ್ನು ತಿಂದಿದ್ದಳು’ ಎನ್ನುವ ಮಾಹಿತಿಯನ್ನು ಹೊತ್ತ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
A nearly 6,000 year old piece of chewing gum, found in Scandinavia, perfectly preserved the DNA of its chewer. She was a young, hunter-gatherer girl, with dark skin, brown hair & blue eyes, who had recently eaten a meal of hazelnuts & duck. Archaeology is amazing. pic.twitter.com/kfav9PkonE
— Dorsa Amir (@DorsaAmir) July 13, 2023
ಡಾ. ಡೋರ್ಸಾ ಅಮೀರ್ ಎಂಬ ಟ್ವೀಟಿಗರು ಇದನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ 5,700 ವರ್ಷ ಹಳೆಯ ಚೂಯಿಂಗ್ ಗಮ್‌ನಿಂದ ಮಾನವ ಜೀನೋಮ್ ಅನ್ನು ಮರಳಿ ಪಡೆದುದರ ಕುರಿತು ಇಂಗ್ಲಿಷ್ ಲೇಖನವೊಂದರ ಲಿಂಕ್ ಅನ್ನು ಈಕೆ ಈ ಟ್ವೀಟಿನಡಿ ಲಗತ್ತಿಸಿದ್ದಾರೆ. ಅನೇಕರು ಈ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಆ ಹುಡುಗಿಯ ಚರ್ಮದ ಬಣ್ಣವನ್ನೂ ಕೂಡ ಅಷ್ಟೊಂದು ದೃಢವಾಗಿ ಪತ್ತೆ ಹಚ್ಚಿದ್ದಾರಲ್ಲ! ಎಂದು ಒಬ್ಬರು ಕೇಳಿದ್ದಾರೆ. ಬಹುಶಃ ಈಕೆ ನನ್ನ ಅಜ್ಜಿಯಾಗಿದ್ದಿರಬಹುದು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಮ್ಮ ಪೂರ್ವಜರು ಬೇಟೆ ಪ್ರವೃತ್ತಿಯಿಂದ ಅವರು ಕೃಷಿಗೆ ಇಳಿದಾಗ ಅವರ ಆಹಾರ ಪದ್ಧತಿಯೂ ಬದಲಾಯಿತು. ಆದ್ದರಿಂದಲೇ ನಮಗೆ ವಿಟಮಿನ್ ಡಿ ಕೊರತೆ ಉಂಟಾಗಿದೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹ್ ನನಗಂತೂ ಆ ಬಾಲೆ ಪುಟ್ಟ ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಮಗದೊಬ್ಬರು.





