Mysore
23
overcast clouds

Social Media

ಬುಧವಾರ, 16 ಜುಲೈ 2025
Light
Dark

ಕೊಲೆ ಆರೋಪ: ಮೈಸೂರಿನಲ್ಲಿ ನಟ ದರ್ಶನ್‌ ಬಂಧನ

ಮೈಸೂರು: ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತ ನಟ ದರ್ಶನ್‌ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

ದರ್ಶನ್‌ ನೇತೃತ್ವದಲ್ಲಿ ಒಟ್ಟು 10 ಮಂದಿಯನ್ನು ಕೊಲೆ ಮಾಡಿದ ಆರೋಪದಡಿಯಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರೇ ಕೊಲೆಯಾದ ವ್ಯಕ್ತಿಯಾಗಿದ್ದು, ದರ್ಶನ್‌ ಆಪ್ತೆ ಪವಿತ್ರಾ ಗೌಡ ಅವರಿಗೆ ಮೆಸೆಜ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.

ದರ್ಶನ್‌ ಆಪ್ತರಾದ ಪವಿತ್ರಾ ಗೌಡ ಎಂಬುವವರಿಗೆ ಈ ರೇಣುಕಾಸ್ವಾಮಿ ಅವರು ಅಶ್ಲೀಲ ಮೆಸೆಜ್‌ಗಳನ್ನು ಮಾಡಿದ್ದಾರೆ ಎಂದು ತಿಳಿದು ಅವರನ್ನು ದರ್ಶನ್‌ ಆದೇಶದ ಮೇರೆಗೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪವಿತ್ರಾಗೆ ಅಶ್ಲೀಲ ಮೆಸೆಜ್‌ ಮಾಡಿದ ಎನ್ನುವ ಕಾರಣಕ್ಕೆ ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ತಲೆಗೆ ಅತಿ ತೂಕವಾದ ವಸ್ತುವಿನಿಂದ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಆತನ ದೇಹವನ್ನು ರಸ್ತೆ ಬದಿಯಲ್ಲಿ ಬಿಸಾಡಿದ್ದಾರೆ. ಇನ್ನು ನಾಯಿಗಳು ಶವವನ್ನು ಕಿತ್ತು ತಿನ್ನುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಖ್ಯಾತ ಬಿಸನೆಸ್‌ಮ್ಯಾನ್‌ ಮಗ ವಿನಯ್‌ ಅವರ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆಯಾಗಿದ್ದು, ಹಲ್ಲೆದ ಮಾಡಿದವರ ಪೈಕಿ ಪ್ರಮುಖ ನಾಲ್ವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ನಟ ದರ್ಶನ್‌ ಅವರನ್ನು ಮೈಸೂರಿನ ಖಾಸಗಿ ಹೋಟೆಲ್‌ ರ್ಯಾಡಿಸನ್‌ ಬ್ಲ್ಯೂನಲ್ಲಿ ಇಂದು ಬೆಳಿಗ್ಗೆ 8.30 ಸಮಯದಲ್ಲಿ ವಿಜಯನಗರ ಪೊಲೀಸ್‌ ಎಸಿಪಿ ಚಂದನ್‌ ನೇತೃತ್ವದಲ್ಲಿ ಬಂಧಿಸಲಾಗಿದೆ.

ಮೈಸೂರಿನಿಂದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ದರ್ಶನ್‌ ಅವರನ್ನು ರವಾನಿಸಲಾಗಿದೆ._

Tags:
error: Content is protected !!