‘ಪಶ್ಚಿಮ ಬಂಗಾಳದಲ್ಲಿ ಲಷ್ಕರ್ ಉಗ್ರನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸೇನಾ ವಾಹನಗಳಿಗೆ ಅಲ್ಲಿನ ಮುಸ್ಲಿಮರು ತಡೆಒಡ್ಡಿದ್ದಾರೆ. ಅವರ ಸಂಖ್ಯೆ ಕಡಿಮೆ ಇದ್ದೇ, ಹೀಗೆ ಮಾಡುತ್ತಿದ್ದಾರೆ. ಇನ್ನು ಸಂಖ್ಯೆ ಹೆಚ್ಚಾದರೆ ಪರಿಸ್ಥಿತಿ ಏನು’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ತಿರುಚಲಾದ ಮಾಹಿತಿ.
‘ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ 2021ರ ಮಾರ್ಚ್‌ನಲ್ಲಿ ಭೇಟಿ ನೀಡಿದ್ದರು. ಅವರ ಭೇಟಿಯನ್ನು ಖಂಡಿಸಿ, ಅಲ್ಲಿನ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. 2021ರ ಮಾರ್ಚ್ 26ರಂದು ಚಿತ್ತಗಾಂಗ್‌ನಲ್ಲಿ ಭದ್ರತಾ ಪರಿಶೀಲನೆಗೆ ಎಂದು ಅಲ್ಲಿನ ಸೇನಾಧಿಕಾರಿಗಳು ಭೇಟಿ ನೀಡಿದ್ದರು. ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಮರು ಆ ಸೇನಾಧಿಕಾರಿಗಳ ವಾಹನಗಳನ್ನು ತಡೆದಿದ್ದರು. ಪ್ರತಿಭಟನೆಯ ವಿಡಿಯೊವನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.