Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮಣಿಪುರ ಮತ್ತೆ ಉದ್ವಿಗ್ನ; ಕರ್ಫ್ಯೂ ಜಾರಿ, ಸೇನೆ ನಿರೋಜನೆ

ಇಂಫಾಲ: ಭಾರಿ ಪ್ರಮಾಣದ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸೋಮವಾರ ಮತ್ತೆ ಹಿಂಸಾಚಾರ ವರದಿಯಾಗಿದೆ. ಇಂಫಾಲ್‌ನಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ವರದಿಗಳ ನಂತರ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

ವರದಿಗಳ ಪ್ರಕಾರ, ಇಂಫಾಲ್‌ನ ನ್ಯೂ ಚೆಕಾನ್ ಪ್ರದೇಶದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯಗಳು ಮುಖಾಮುಖಿಯಾದ ನಂತರ ಈ ಪ್ರದೇಶದಲ್ಲಿ ಕರ್ಫ್ಯೂ ಅನ್ನು ಪುನಃ ಹೇರಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ಕರೆಸಲಾಗಿದೆ.

ರಾಷ್ಟ್ರೀಯ ಟಿವಿ ಮಾಧ್ಯಮಗಳ ವರದಿಗಳ ಪ್ರಕಾರ ಹಿಂದಿನ ಹಿಂಸಾಚಾರದ ನಂತರ ಜನರು ಖಾಲಿ ಮಾಡಿದ ಖಾಲಿ ಮನೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಕೆಲವು ಮನೆಗಳಿಗೂ ಮತ್ತೆ ಬೆಂಕಿ ಹಚ್ಚಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!