Mysore
21
overcast clouds

Social Media

ಭಾನುವಾರ, 13 ಜುಲೈ 2025
Light
Dark

ಲೋಕಸಭಾ ಚುನಾವಣೆ: ಬಿಜೆಪಿಯಿಂದ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳ ನೇಮಕ

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮುಂಬರುವ ಲೋಕಸಭೆ ಚುನಾವಣೆಗಾಗಿ ಈ ಕೆಳಗಿನ ರಾಜ್ಯಗಳಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ಮತ್ತು ಸಹ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಕರ್ನಾಟಕದ ಉಸ್ತುವಾರಿಯನ್ನಾಗಿ ಮತ್ತು ಸುಧಾಕರ್ ರೆಡ್ಡಿ ಅವರನ್ನು ಕರ್ನಾಟಕದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಶನಿವಾರ ಆದೇಶ ಹೊರಡಿಸಿದೆ.

ಒಟ್ಟು 23 ಮಂದಿಯನ್ನು ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಕೇರಳದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಉಸ್ತುವಾರಿಗಳ ಪಟ್ಟಿ: ಬೈಜಯಂತ್ ಪಾಂಡಾ ಉತ್ತರ ಪ್ರದೇಶದ ನೂತನ ಉಸ್ತುವಾರಿಯಾಗಲಿದ್ದಾರೆ. ಬಿಹಾರದ ಚುನಾವಣಾ ಉಸ್ತುವಾರಿಯಾಗಿ ವಿನೋದ್ ತಾವ್ಡೆ, ವಿಜಯಪಾಲ್ ತೋಮರ್ ಒಡಿಶಾಗೆ ಹಾಗೂ ಶ್ರೀಕಾಂತ್ ಶರ್ಮಾ ಅವರನ್ನು ಹಿಮಾಚಲದ ಉಸ್ತುವಾರಿಯನ್ನಾಗಿ ಮಾಡಲಾಗಿದೆ.Image

ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಕೇರಳದ ಉಸ್ತುವಾರಿಯಾಗಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್​ಗೆ ವೈ ಸತ್ಯ ಕುಮಾರ್, ಅರುಣಾಚಲ ಪ್ರದೇಶಕ್ಕೆ ಅಶೋಕ್ ಸಿಂಘಾಲ್, ಚಂಡೀಗಢಕ್ಕೆ ವಿಜಯಭಾಯಿ ರೂಪಾನಿ, ಗೋವಾಕ್ಕೆ ಆಶಿಶ್ ಸೂದ್, ಜಾರ್ಖಂಡ್​ಗೆ ಲಕ್ಷ್ಮೀಕಾಂತ ಬಾಜಪೇಯಿ, ಲಡಾಖ್​ಗೆ ತರುಣ್ ಚುಗ್, ಲಕ್ಷ್ಯದ್ವೀಪಕ್ಕೆ ಅರವಿಂದ್ ಮೆನನ್, ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನಾ, ಸಿಕ್ಕಿಂಗೆ ದಿಲೀಪ್ ಜೈಸ್ವಾಲ್, ಉತ್ತರಾಖಂಡಕ್ಕೆ ದುಶ್ಯಂತ್ ಕುಮಾರ್ ಗೌತಮ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

Image

ಬಿಹಾರಕ್ಕೆ ವಿನೋದ್ ತಾವ್ಡೆ, ಹರಿಯಾಣಕ್ಕೆ ಬಿಪ್ಲಬ್ ಕುಮಾರ್ ದೇವ್, ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ, ಮಧ್ಯಪ್ರದೇಶಕ್ಕೆ ಮಹೇಂದ್ರ ಕುಮಾರ್ ಸಿಂಗ್, ಒಡಿಶಾಕ್ಕೆ ವಿಜಯಪಾಲ್ ಸಿಂಗ್ ತೋಮರ್, ತಮಿಳುನಾಡಿಗೆ ಅರವಿಂದ್ ಮೆನನ್, ಪಶ್ಚಿಮ ಬಂಗಾಳಕ್ಕೆ ಮಂಗಲ್ ಪಾಂಡೆ ಇವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲು ಸಲಹೆ ಸೂಚನೆ ನೀಡುವಂತೆ ಯುವ ಮತದಾರರನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಆಹ್ವಾನಿಸಿದ್ದು, ನಮೋ ಅಪ್ಲಿಕೇಶನ್‌ನಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!