Mysore
33
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ದೆಹಲಿ ಮೆಟ್ರೊ ನಿಲ್ದಾಣಗಳ ಗೋಡೆ ಮೇಲೆ ‘ಖಾಲಿಸ್ತಾನ್‌ ಜಿಂದಾಬಾದ್’ ಬರಹ: ಪೊಲೀಸರಿಂದ ತನಿಖೆ

ನವದೆಹಲಿ: ದೆಹಲಿ ಮೆಟ್ರೊ ನಿಲ್ದಾಣಗಳ ಗೋಡೆ ಮೇಲೆ ಖಲಿಸ್ತಾನ ಪರ ಗೋಡೆ ಬರಹಗಳು ಕಾಣಿಸಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ದೆಹಲಿಯ 5ಕ್ಕೂ ಹೆಚ್ಚು ಮೆಟ್ರೊ ನಿಲ್ದಾಣಗಳ ಗೋಡೆಗಳ ಮೇಲೆ ಕಿಡಿಗೇಡಿಗಳು ‘ದೆಹಲಿ ಬನೇಗಾ ಖಾಲಿಸ್ತಾನ್ ಮತ್ತು ಖಾಲಿಸ್ತಾನ್ ಜಿಂದಾಬಾದ್’ ಎಂಬ ಬರಹಗಳನ್ನು ಬರೆದಿದ್ದಾರೆ. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಿ20 ಮೇಲೆ ಕರಿನೆರಳು
ಮುಂದಿನ ತಿಂಗಳು ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು, ಇದರ ಬೆನ್ನಲ್ಲೇ ಕಿಡಿಗೇಡಿಗಳ ಈ ಕೃತ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಡೀ ದೇಶವೇ ಜಿ20 ಶೃಂಗಸಭೆಗೆ ಅತಿಥ್ಯ ವಹಿಸುತ್ತಿದೆ. ಆದರೆ ಅತಿಥಿಗಳು ದೆಹಲಿಗೆ ಆಗಮಿಸುತ್ತಾರೆ. ಜಿ20 ಶೃಂಗಸಭೆ ಯಶಸ್ವಿಗೊಳಿಸಲು ದೆಹಲಿ ನಿವಾಸಿಗಳ ಮೇಲೆ ವಿಶೇಷ ಜವಾಬ್ದಾರಿ ಇದೆ. ರಾಷ್ಟ್ರದ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಜಿ-20 ಶೃಂಗಸಭೆ ಸೆ. 9 ಹಾಗೂ 10ರಂದು ನಡೆಯಲಿದೆ. 40ಕ್ಕೂ ಹೆಚ್ಚು ದೇಶಗಳ ನಾಯಕರು, ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಯ್ದ ದೇಶಗಳ ಅತಿಥಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ