Mysore
24
overcast clouds

Social Media

ಭಾನುವಾರ, 10 ಮೇ 2026
Light
Dark

ಕಾಗವಾಡ: ದಾಖಲೆ ಇಲ್ಲದ ₹70 ಲಕ್ಷ ನಗದು ವಶ

ಕಾಗವಾಡ (ಬೆಳಗಾವಿ ಜಿಲ್ಲೆ): ಕಾಗವಾಡ– ಮಿರಜ್‌ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಬುಧವಾರ, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 70 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮಿರಜ್‌ನಿಂದ ಕಾಗವಾಡ ತಾಲ್ಲೂಕಿನ ಉಗಾರ ಪಟ್ಟಣಕ್ಕೆ ಬರುತ್ತಿದ್ದ ಕಾರಿನಲ್ಲಿ ಈ ಹಣ ಸಿಕ್ಕಿದೆ. ಕಾರ್‌ ವಶಪಡಿಸಿಕೊಂಡ ಪೊಲೀಸರು ಚಾಲನಕನ್ನು ಬಂಧಿಸಿದ್ದಾರೆ. ಆದರೆ, ಹಣ ಯಾರಿಗೆ ಸೇರಿದ್ದು ಎಂಬ ಮಾಹಿತಿ ನೀಡಿಲ್ಲ.

ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ ಹಾರೂಗೇರಿ ಚೆಕ್‌ಪೋಸ್ಟ್‌ನಲ್ಲಿ ಕೂಡ ₹2.30 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. ಯರಗಟ್ಟಿ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 3.5 ಲಕ್ಷ ಮೊತ್ತದ ಹೊಲಿಗೆ ಯಂತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!