Mysore
30
clear sky

Social Media

ಶನಿವಾರ, 31 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮನದ ಭಾಷೆಯಾಗಲಿ ಕನ್ನಡ

ಓದುಗರ ಪತ್ರ

ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು.ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆಯೆಂದು ನೆನಸಿಕೊಂಡರೆ ಕನ್ನಡ ನಿಜವಾಗಿಯೂ ಬದುಕಿ ಬಾಳುವ ಭಾಷೆಯಾಗಿ ಉಳಿಯುತ್ತದೆಯೇ ಎಂದು ತೀವ್ರ ಆತಂಕವಾಗುತ್ತದೆ. ಇತ್ತೀಚೆಗೆ ಸಾಮಾಜಿಕ ಜಲತಾಣದಲ್ಲಿ ಕನ್ನಡದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿರುವ ಹಲವಾರು ಸರ್ಕಾರೇತರ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗ ನಿರಾಕರಿಸುತ್ತಿರುವ ಬಗ್ಗೆ ಅಲವತ್ತಿಕೊಂಡಿರುವುದನ್ನು ಗಮನಿಸಿದರೆ ಕನ್ನಡ ಭಾಷೆಯ ಬಗ್ಗೆ, ಕನ್ನಡಿಗರ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಹಿಡಿದ ಕೈಗನ್ನಡಿಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಬಂದಿರುವ ಸ್ಥಿತಿ ಪ್ರಪಂಚದಲ್ಲಿ ಬೇರೆ ಯಾವ ಭಾಷೆಗೂ ಬಂದಿರಲಿಕ್ಕಿಲ್ಲ. ಇದಕ್ಕೆ ಸರ್ಕಾರವನ್ನು ದೂಷಿಸುವುದರಿಂದ ಏನೂ ಪ್ರಯೋಜನವಿಲ್ಲ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಅದು ಅಂತಿಮವಾಗಿ ಕನ್ನಡಿಗರ ಬಾಗಿಲಿಗೇ ಬಂದು ನಿಲ್ಲುತ್ತದೆ. ಕನ್ನಡಿಗರು ಕನ್ನಡಿಗರೊಂದಿಗೆ ಕನ್ನಡದ ಮಾತನಾಡುವ ಜಯಮಾನ ಬೆಳೆಸಿಕೊಂಡರೆ ಸಾಕು. ಕನ್ನಡ ಎಷ್ಟೋ ಚೇತರಿಸಿಕೊಂಡುಬಿಡುತ್ತದೆ.

ಕನ್ನಡ ರಾಜ್ಯೋತ್ಸವದ ಈ ಶುಭ ಘಳಿಗೆಯಲ್ಲಿ ಕನ್ನಡದ ಎಲ್ಲ ಭ್ರಾತೃ- ಭಗಿಯನಿಯರಿಗೆ ಕನ್ನಡ ಉಳಿಸಿ ಬೆಳೆಸಬೇಕಾಗಿದೆ. ಅದೆಂದರೆ, ನಿಮಗೆ ಬರುವ ಎ ದೂರವಾಣಿ ಕರೆಗಳಿಗೆ ಕಡ್ಡಾಯವಾಗಿ ಕನ್ನಡದ ಉತ್ತರಿಸಬೇಕು. ದೈನಂದಿನ ಜೀವನದಲ್ಲಿ ಯಥೇಚ್ಛವಾಗಿ ಉಪಯೋಗಿ ಸುವ ವಾಟ್ಸಾಪ್, ಟೆಲಿಗ್ರಾಮ್ ಮಾಧ್ಯಮಗಳಲ್ಲಿ ಕಡ್ಡಾಯವಾಗಿ ಕನ್ನಡ ವನ್ನೇ ಉಪಯೋಗಿಸಬೇಕು. ಸಾರ್ವಜನಿಕೆ ಜೀವನದಲ್ಲಿ ಕನ್ನಡದ ವ್ಯವಹರಿಸಬೇಕು. ಕನಿಷ್ಠ ಒಂದು ಕನ್ನಡ ಪತ್ರಿಕೆ, ಒಂದು ಕನ್ನಡ ವಾರ ಪತ್ರಿಕೆಗೆ ಚಂದಾದಾರರಾಗಬೇಕು.

-ಎಂ.ಜಿ.ವಿಜಯಕುಮಾರ್, ಮೈಸೂರು

Tags:
error: Content is protected !!