ಬೆಂಗಳೂರಿನಲ್ಲಿ ನೋಂದಣಿಯಾಗದೆ ನಡೆದಿರುವ ರೂ. ೫೦೦೦ ಕೋಟಿ ಕ್ರಿಪ್ಟ್ರೋ ಅಕ್ರಮ ವಹಿವಾಟು ದೇಶದ ಆರ್ಥಿಕ ಭದ್ರತೆಗೆ ಬಡಿದಿರುವ ಎಚ್ಚರಿಕೆ ಘಂಟೆಯಾಗಿದೆ. ಆರ್‌ಪಿಎಫ್ಎಸ್ ಟೆಕ್ನಾಲಜೀಸ್ ಕಂಪೆನಿಯು ಯಾವುದೇ ಪರವಾನಗಿ ಇಲ್ಲದೆ ಸೈಬರ್ ಕಾಯಿನ್ ಹಾಗೂ ಮಡ್ರೇಕ್ ಮೂಲಕ ಗ್ರಾಹಕರ ಹಣವನ್ನು ವಿದೇಶಿ ಶೆಲ್ ಕಂಪೆನಿಗಳಿಗೆ ಹರಿಸಿರುವುದು ಆಘಾತಕಾರಿ. ಸಿಂಗಾಪುರ ಮತ್ತು ದುಬೈನ ತೆರಿಗೆ ವಿನಾಯತ್ ತಾಣಗಳನ್ನು ದುರುಪಯೋಗಪಡಿಸಿಕೊಂಡು ಕೇವಲ ತಂತ್ರಾಂಶ ನಿರ್ವಹಣೆಯ ಹೆಸರಿನಲ್ಲಿ ರೂ. ೩೮೦ ಕೋಟಿ ಭಾರತೀಯ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗಿರುವುದು ವ್ಯವಸ್ಥೆಯ ವೈಫಲ್ಯವನ್ನು ತೋರುತ್ತದೆ.
ಸರ್ಕಾರವು ಈ ಕೂಡಲೇ ಕಠಿಣ ಕಾನೂನು ಜರಿಗೆ ತರಬೇಕು. ಶೆಲ್ ಕಂಪೆನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಸುಧಾರಿತ ಸೈಬರ್ ಭದ್ರತೆಯನ್ನು ಅಳವಡಿಸಬೇಕು. ಇಲ್ಲದಿದ್ದರೆ ಇಂತಹ ಹಗರಣಗಳು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತವೆ.
ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು


