Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ – ಬಿಜೆಪಿ ಸೇರುತ್ತಿದ್ದೇನೆ : ಸಂಸದೆ ಸುಮಲತಾ ಅಂಬರೀಷ್‌

ಮಂಡ್ಯ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್‌ ಘೋಷಿಸಿದ್ದಾರೆ.

ನಗರದಲ್ಲಿ ಸ್ವಾಭಿಮಾನಿ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಆದ್ರೆ ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದು ಹೇಳುವ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಸಂಸದೆಯ ಸ್ಥಾನ ಇಂದು ಇರುತ್ತದೆ ಆಳೆ ಹೋಗುತ್ತೆ ಆದರೆ ಮಂಡ್ಯ ಸೊಸೆ ಎಂಬ ಸ್ಥಾನವನ್ನು ಯಾರು ನನ್ನಿಂದ ಕಿತ್ತುಕೊಳ್ಳು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಇಂದು ಸಂಸದೆ ಆಗಿರಬಹುದು ನಾಳೆ ಇನ್ನೋಂದು ಹುದ್ದೆ ಅಲಂಕರಿಸಬಹುದು. ನಾನು ಯಾವುದೇ ಹುದ್ದೆಯಲ್ಲಿದ್ದರು ಸದಾ ಮಂಡ್ಯ ಜಿಲ್ಲೆಯ ಅಭಿವೃದ್ದಿಗಾಗಿ ದುಡಿಯುತ್ತೇನೆ ಎಂದರು.

ಬಿಜೆಪಿಗೆ ಬೆಂಬಲ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಮೈತ್ರಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ತಾವು ಬಿಜೆಪಿ ಪಕ್ಷಕ್ಕೆ ಸೇರುತ್ತಿರುವುದಾಗಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಮೋದಿ ನಾಯಕತ್ವ ಮೆಚ್ಚಿಕೊಳ್ಳಬೇಕು : ಅಭಿವೃದ್ದಿಯೇ ನನ್ನ ಮೂಲ ಮಂತ್ರ ಎಂದು ಹೇಳಿಕೋಡು ಮುನ್ನುಗುತ್ತಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಎಂದು ಸ್ವಾರ್ಥ ರಾಜಕಾರಣ ಮಾಡಿಲ್ಲ. ಅಂಥಾ ನಾಯಕತ್ವವನ್ನು ನಾವು ಮೆಚ್ಚಿಕೊಳ್ಳಬೇಕು. ಅಂಥಾ ನಾಯಕರ ಜೊತೆ ಕೆಲಸ ಮಾಡಿದಾಗ ನಾನು ನಮ್ಮ ಜಿಲ್ಲೆಗೆ ಸಾಕಷ್ಟ ಕೊಡುಗೆಗಳನ್ನು ತರಬಹುದು ಎಂದರು.

Tags:
error: Content is protected !!