ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ ಮೈದಾಹಿಟ್ಟು ಅಡುಗೆ ಎಣ್ಣೆ, ಬೆಣ್ಣೆ, ತುಪ್ಪ, ಕೊಬ್ಬಿನ ಮಾಂಸಾಹಾರ ಪದಾರ್ಥಗಳ ಬಳಕೆ ಬಗ್ಗೆ ಜಾಗೃತಿ, ನಿಯಂತ್ರಣ ವಿಧಿಸುವ ಅವಶ್ಯಕತೆ ಇದೆ.
ಗ್ರಾಹಕರು ಹೋಟೆಲ್‌ಗಳಲ್ಲಿ ತುಪ್ಪದ ದೋಸೆ, ಬೆಣ್ಣೆ ದೋಸೆಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಅಪರೂಪಕ್ಕೆ ತಿಂದರೆ ತೊಂದರೆ ಇಲ್ಲ. ಆದರೆ ಅದನ್ನು ಹೆಚ್ಚು ತಿನ್ನುವುದು ಹೃದಯ ಕಾಯಿಲೆಗಳಿಗೆ ಆಹ್ವಾನವಿತ್ತಂತೆ ಆಗುತ್ತದೆ. ಒಂದು ಮಸಾಲೆ ದೋಸೆಗೆ ಕನಿಷ್ಠ ೩೦-೪೦ ಎಂ ಎಲ್ ಎಣ್ಣೆ ಹಾಕುತ್ತಾರೆ. ಇದು ಸಹನೀಯವಲ್ಲ. ಕೇವಲ ಉಪ್ಪು ಕಡಿಮೆ ತಿನ್ನಿ, ಸಕ್ಕರೆ ಕಡಿಮೆ ಬಳಸಿ ಎಂದು ಪೊಟ್ಟಣಗಳ ಮೇಲೆ ಮುದ್ರಿಸುವುದರಿಂದ ಹೆಚ್ಚು ಪರಿಣಾಮ ಬೀರುವುದಿಲ್ಲ.
ಧೂಮಪಾನ/ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಜಾಹೀರಾತುಗಳಿಂದ ಯಾವ ಪ್ರಯೋಜನವೂ ಇಲ್ಲ.ಇದನ್ನೇ ಬಂಡವಾಳ ಮಾಡಿಕೊಂಡ ಸರ್ಕಾರಗಳು ಅದರ ಮೇಲೆ ಶೇ. ೨೦೦ ರಷ್ಟು ತೆರಿಗೆ ವಿಧಿಸಿದ್ದರೂ ಅವುಗಳ ಬಳಕೆ ಏರಿತ್ತಲೇ ಇದೆ ಎನ್ನುವುದು ಚೋದ್ಯದ ಸಂಗತಿ.
-ಮುಳ್ಳೂರು ಪ್ರಕಾಶ್, ಮೈಸೂರು


