ಆಂಧ್ರಪ್ರದೇಶ : ರಾಜ್ಯಸಭಾ ಸದಸ್ಯನ ಪುತ್ರಿ ಒಬ್ಬಳು ಪಾದಾಚಾರಿಯಬ್ಬನ ಮೇಲೆ ಕಾರು ಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯನ ಪುತ್ರಿ ವೀಣಾ ಮಾಧುರಿ ಫುಟ್‌ಪಾತ್ ಮೇಲೆ ಮಲಗಿದ್ದ ಯುವಕನ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾಳೆ.
ಕಾರು ಹರಿದ ಪರಿಣಾಮ ಫುಟ್‌ಪಾತ್ ಮೇಲೆ ಮಲಗಿದ್ದ 22ವರ್ಷದ ಯುವಕ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಘಟನೆ ನಡೆದ ಬಳಿಕೆ ರಾಜಕಾರಣಿ ಪುತ್ರಿ ಸ್ಟೇಷನ್ ಬೇಲ್ ಪಡೆದು ಹೊರಬಂದಿದ್ದಾಳೆ. ಸ್ಟೇಷನ್ ಬೇಲ್ ನೀಡಿರುವ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.