Mysore
19
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ನ್ಯಾಕ್ ನ ನೂತನ ನಿರ್ದೇಶಕರಾಗಿ ಶಿಕ್ಷಣ ತಜ್ಞ ಪ್ರೊ.ಗಣೇಶ್ ನೇಮಕ

ನವದೆಹಲಿ: ಶಿಕ್ಷಣ ತಜ್ಞ ಪ್ರೊ.ಗಣೇಶ್ ಕನ್ನಬೀರನ್ ಅವರನ್ನು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್) ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಪ್ರೊ.ಕನ್ನಬೀರನ್ ಅವರು ಶುಕ್ರವಾರ ನ್ಯಾಕ್ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ನ್ಯಾಕ್ ಪ್ರಕಟಣೆ ಹೊರಡಿಸಿದೆ.

ತಿರುಚ್ಚಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿಯಾಗಿರುವ  ಪ್ರೊ.ಗಣೇಶ್ ಕನ್ನಬೀರನ್ ಅವರು ಬೋಧನೆ, ಸಂಶೋಧನೆ ಮತ್ತು ಆಡಳಿತದಲ್ಲಿ 30 ವರ್ಷಗಳ ಅನುಭವ ಹೊಂದಿದ್ದಾರೆ.

ಪ್ರೊ.ಗಣೇಶ್ ಕನ್ನಬೀರನ್ ಸಂಶೋಧನೆ ಮತ್ತು ಸಮಾಲೋಚನೆಯ ಡೀನ್ ಆಗಿ ಮತ್ತು ಎನ್ಐಟಿ ತಿರುಚ್ಚಿ ಹಾಗೂ ಎನ್ಐಟಿ ಪುದುಚೇರಿಯ ಪ್ರಭಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!