Mysore
29
light rain

Social Media

ಬುಧವಾರ, 05 ಆಗಸ್ಟ್ 2026
Light
Dark

ದೀಪಾವಳಿ ಹಬ್ಬ: ಹಸಿರು ಪಟಾಕಿ ಮಾತ್ರ ಬಳಸಿ: ಸಿದ್ದರಾಮಯ್ಯ ಮನವಿ

ಬೆಂಗಳೂರು : ಎಲ್ಲರೂ ಪರಿಸರ ಸ್ನೇಹಿಯಾದ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ, ಪಟಾಕಿ ಹಚ್ಚುವಾಗ ಕುಟುಂಬದ ಹಿರಿಯರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿ ತಮ್ಮೆಲ್ಲರ ಬಾಳಿನಲ್ಲಿ ಸುಖ, ಸಮೃದ್ಧಿಯ ಹೊಸ ಬೆಳಕು ಹೊತ್ತು ತರಲಿ ಎಂದು ಹಾರೈಸುತ್ತೇನೆ ಎಂದು ತಮ್ಮ ಅಧಿಕೃತ ಎಕ್ಸ್‌(ಟ್ವಿಟರ್‌) ನಲ್ಲಿ ಬರೆದುಕೊಂಡಿದ್ದಾರೆ.

ಅಜ್ಞಾನದ ಅಂಧಕಾರವನ್ನು ಜ್ಞಾನದ ದೀಪದ ಮೂಲಕ ಬೆಳಗುವ ಹಬ್ಬ. ವಿಶೇಷವಾಗಿ ಪಟಾಕಿಗಳ ವಿಚಾರದಲ್ಲಿ ಹಿರಿಯರು-ಕಿರಿಯರು ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಪರಿಸರ ಸ್ನೇಹಿ ಪಟಾಕಿಗಳನ್ನೇ ಬಳಸುವಂತೆ ವಿನಂತಿಸುತ್ತೇನೆ ಎಂದು ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!