Mysore
30
broken clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಜೆ ಡಿ ಎಸ್‌ , ಕಾಂಗ್ರೆಸ್‌ ಗೆ ಇಚ್ಛಾಶಕ್ತಿ ಇಲ್ಲ : ಸಚಿವ ಶ್ರೀರಾಮುಲು

ಮೈಸೂರು : ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೂರು ಪಕ್ಷಗಳ ನಡುವೆ  ಕ್ರೆಡಿಟ್ ವಾರ್ ಶುರುವಾಗಿದೆ . ಈ ನಡುವೆ  ಕಾಂಗ್ರೆಸ್, ಜೆಡಿಎಸ್ ಗೆ ಸಾರಿಗೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ  ಮಾತನಾಡಿದ ಸಚಿವ ಶ್ರೀರಾಮುಲು,   ಯಾರ ಅವಧಿಯಲ್ಲಿ ಸಮಿತಿ ರಚನೆ ಯಾಗಿದೆ ಎಂಬುದು ಮುಖ್ಯವಲ್ಲ. ಆದರೆ ಮೀಸಲಾತಿ ಹೆಚ್ಚಳ ಅನುಷ್ಟಾನಕ್ಕೆ ತಂದಿರುವುದು ಬಿಜೆಪಿ. 

ಜೆಡಿಎಸ್,  ಕಾಂಗ್ರೆಸ್ ಗೆ ರಾಜಕೀಯ ಇಚ್ಚಾಶಕ್ತಿ ಕೊರತೆ ಇದೆ.  ಹೀಗಾಗಿ ಮೀಸಲಾತಿ  ಹೆಚ್ಚಳ ಮಾಡಿರಲಿಲ್ಲ. ನಮಗೆ ಇಚ್ಚಾಶಕ್ತಿ ಇದೆ . ಹೀಗಾಗಿ ಮೀಸಲಾತಿ ಹೆಚ್ಚಳ ಅನುಷ್ಟಾನ ತಂದಿದ್ದೇವೆ. ಬಿಎಸ್ ವೈ, ಸಿಎಂ ಬಸವರಾಜ ಬೊಮ್ಮಾಯಿ ಅವರ  ಇಚ್ಚಾ ಶಕ್ತಿಯಿಂದ ಮೀಸಲಾತಿ ಹೆಚ್ಚಳ ಅನುಷ್ಟಾನ ಮಾಡಿದ್ದೇವೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!