Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಹಲಾಲ್ ಮಾಂಸ ಬಳಕೆ: ದೇಶಾದ್ಯಂತ ‘ಸ್ಟಾರ್ ಬಕ್ಸ್’ ಬಹಿಷ್ಕಾರಕ್ಕೆ ಹಿಂದುತ್ವ ಸಂಘಟನೆ ಕರೆ

ಮುಂಬೈ: ಹಿಂದುತ್ವ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿಯು ದೇಶಾದ್ಯಂತ ಸ್ಟಾರ್ ಬಕ್ಸ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ ಎಂದು freepressjournal.in ವರದಿ ಮಾಡಿದೆ.

ಈ ಕುರಿತು Free Press Journal ಸಂಸ್ಥೆಗೆ ಪ್ರತಿಕ್ರಿಯಿಸಿರುವ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ್ ಶಿಂದೆ, ಸ್ಟಾರ್ ಬಕ್ಸ್ ತನ್ನ ಉತ್ಪನ್ನಗಳಲ್ಲಿ ಕೇವಲ ಹಲಾಲ್ ಮಾಂಸವನ್ನು ಮಾತ್ರ ಬಳಸುತ್ತಿರುವುದರಿಂದ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಸ್ಟಾರ್ ಬಕ್ಸ್ ಮಳಿಗೆಗಳಿಗೆ ತನ್ನ ಸ್ವಯಂಸೇವಕರನ್ನು ಕಳಿಸಿದ್ದು, ಅವರು ಅಲ್ಲಿ ಅಂತಾರಾಷ್ಟ್ರೀಯ ಜಾಲದ ಮಾರಾಟ ಸಿಬ್ಬಂದಿಗಳು ನಾವು ಹಲಾಲ್ ಮಾಂಸವನ್ನು ಮಾತ್ರ ಬಳಸುತ್ತೇವೆ ಎಂದು ದೃಢಪಡಿಸುತ್ತಿರುವ ದೃಶ್ಯಗಳ ವಿಡಿಯೊವನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಯಾವುದೇ ಸಂಸ್ಥೆಯು ಹಲಾಲ್ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ ಮುನ್ನ ಹಲಾಲ್ ಪ್ರಮಾಣ ಪತ್ರವನ್ನು ಪಡೆಯಬೇಕಿದೆ. ಇದರಿಂದ ಬರುವ ನಿಧಿಯನ್ನು ಪ್ರಶ್ನಾರ್ಹ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಶಿಂದೆ ಆರೋಪಿಸಿದ್ದಾರೆ.

ಯಾವುದೇ ಕಾರಣಕ್ಕಾದರೂ ಮುಸ್ಲಿಮೇತರ ಜನರ ಮೇಲೆ ಹಲಾಲ್ ಮಾಂಸವನ್ನು ಹೇರುವುದು ಅನ್ಯಾಯಕರ. ಹಿಂದೂ ಜನಜಾಗೃತಿ ಸಮಿತಿಯು ಹಲಾಲ್ ಆರ್ಥಿಕತೆಯ ವಿರುದ್ಧ ಹಲವಾರು ತಿಂಗಳಿನಿಂದ ಅಭಿಯಾನವನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ