ಜಮ್ಮು-ಕಾಶ್ಮೀರ : ಪಾಕಿಸ್ತಾನದ ಒಳನುಸುಳುಕೋರನನ್ನು ನಸುಕಿನ ಜಾವ ಬಿಎಸ್ ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಮುಂಜಾನೆ ಸಾಂಬಾ ಸೆಕ್ಟರ್ ನಲ್ಲಿರುವ ಅಂತಾರಾಷ್ಟ್ರೀಯ ಗಡಿಯನ್ನು ಪಾಕಿಸ್ತಾನದ ಕಡೆಯಿಂದ ನುಸುಳಲು ಯತ್ನಿಸಿದಾಗ ಘಟನೆ ನಡೆದಿದೆ.
ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನ ಕಡೆಯಿಂದ ಅಂತಾರಾಷ್ಟ್ರೀಯ ಗಡಿಭಾಗವನ್ನು ನುಸುಳಿ ಶಂಕಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬ ಸಂಚರಿಸುತ್ತಿದ್ದ. ಬಿಎಸ್‍ಎಫ್ ಯೋಧರು ಆತನಿಗೆ ಎಚ್ಚರಿಕೆ ನೀಡಿದರು.
ಆದರೂ ಯೋಧರ ಮಾತನ್ನು ಲಕ್ಷಿಸದೆ ಭಾರತದ ಗಡಿಯೊಳಗೆ ಬೇಲಿ ದಾಟಿ ಮುಂದಕ್ಕೆ ಬರಲಾರಂಭಿಸಿದ. ಆಗ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಯೋಧರು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಏಪ್ರಿಲ್ 5 ರಂದು ನುಸುಳುಕೋರನನ್ನು ಬಿಎಸ್‍ಎಫ್ ಬಂಧಿಸಿತ್ತು. ಆರೋಪಿ ಗಡಿಯಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿ ದಾಟಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಗಡಿಯಲ್ಲಿ ಎಚ್ಚರಿಕೆವಹಿಸಿ ಗಸ್ತು ತಿರುಗುತ್ತಿದ್ದ ಬಿಎಸ್‍ಎಫ್ ಸಿಬ್ಬಂದಿ ತಕ್ಷಣ ಆತನನ್ನು ಸೆರೆ ಹಿಡಿದಿದ್ದಾರೆ. ಬಿಒಪಿ ಬಳಿಯ ಗೇಟ್ ನಿಂದ ಕೆಳಗಿಳಿದ ಕೂಡಲೇ ಆತ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನದ ನಗರ್ ಪರ್ಕರ್ ನಿವಾಸಿ ದಯಾರಾಮ್ ಎಂದು ಆತನನ್ನು ಗುರುತಿಸಲಾಗಿದೆ. ಆರೋಪಿಯ ಬಂಧನವನ್ನು ಬಿಎಸ್‍ಎಫ್ ಖಚಿತಪಡಿಸಿದೆ.