Mysore
27
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಕೆ.ಆರ್.ಪೇಟೆ| ಹಿರೀಕಳಲೆ ಬಳಿ ಅಪಘಾತ : ಬೈಕ್ ಸವಾರರಿಬ್ಬರ ಸಾವು

ಕೆ.ಆರ್.ಪೇಟೆ: ತಾಲ್ಲೂಕಿನ ಹಿರೀಕಳಲೆ ಬಳಿ ಭಾನುವಾರ ರಾತ್ರಿ ಹಿಟ್ ಅಂಡ್ ರನ್ ಅಪಘಾತ  ಸಂಭವಿಸಿದ್ದು, ಇಬ್ಬರು ಬೈಕ್ ಸವಾರರ ಧಾರುಣ ಸಾವು ಉಂಟಾಗಿದೆ.

 ಹಿರೀಕಳಲೆ ಗ್ರಾಮದ ಸಂದೇಶ್ ಮತ್ತು ಮರಡಹಳ್ಳಿಯ ಭರತ್ ಮೃತ ದುರ್ದೈವಿಗಳು.

ಎಳನೀರು ವ್ಯಾಪಾರ ಮಾಡಿ ತಮ್ಮ ಮನೆಯ ಸಂಸಾರಕ್ಕೆ ಆಸರೆಯಾಗಿದ್ದ ಯುವಕರಾಗಿದ್ದು, ಭಾನುವಾರ ರಾತ್ರಿ ಸುಮಾರು 10ಗಂಟೆ ಸಮಯದಲ್ಲಿ ಕೆ.ಆರ್.ಪೇಟೆ ಕಡೆಯಿಂದ ಊರಿನ ಕಡೆ ಹೋಗುವಾಗ ಅಪಘಾತ ಸಂಭವಿಸಿದೆ. 

ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಅಪಘಾತ ನಡೆಸಿ ಪರಾರಿಯಾಗಿರುವ ವಾಹನ ಪತ್ತೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಘಟನೆ ಕುರಿತು ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!