Mysore
24
mist

Social Media

ಸೋಮವಾರ, 17 ನವೆಂಬರ್ 2025
Light
Dark

ಬೆಂಗಳೂರು ಬಂದ್‌ʼಗೆ ಅವಕಾಶವಿಲ್ಲ: ಪೊಲೀಸ್ ಕಮಿಷನರ್ ಬಿ. ದಯಾನಂದ್

ಬೆಂಗಳೂರು : ಸೆ.26ರಂದು ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್‌ಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ʼʼನಾಳೆ ಬಂದ್ ಗೆ ಅವಕಾಶ ಇಲ್ಲ, ಅನುಮತಿ ಕೊಡಲ್ಲ ಎಂದು ಸಂಘಟಕರಿಗೆ ಸೂಚಿಸಿದ್ದೇವೆ. ನಾಳೆ ಒತ್ತಾಯ ಪೂರ್ವಕ ಬಂದ್ ಮಾಡಿಸಿದರೆ ಕ್ರಮ ಖಚಿತʼʼ ಎಂದು ಎಚ್ಚರಿಸಿದರು.

ʼʼಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸೆ.25ರ ಮಧ್ಯರಾತ್ರಿಯಿಂದ 26ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಇರಲಿದೆʼʼ ಎಂದು ತಿಳಿಸಿದರು.

ʼʼ2016 ರಲ್ಲಿ ನಡೆದ ಘಟನೆ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಬಸ್ ಗಳಿಗೆ ಭದ್ರತೆ ನೀಡೋದರ ಬಗ್ಗೆಯೂ ಚರ್ಚೆ ಮಾಡಲಾಗ್ತಾ ಇದೆ, ತಮಿಳುನಾಡು ಬಸ್ ಗಳಿಗೂ ಭದ್ರತೆ ಬೇಕು ಅಂದ್ರೆ ಕೊಡುತ್ತೇವೆʼʼ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!