Mysore
29
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ನಟ ಉಪೇಂದ್ರ ಹೇಳಿಕೆ ಸಂವಿಧಾನಕ್ಕೆ ಮಾಡಿದ ಅಪಚಾರ: ಸಚಿವ ಎಚ್.ಸಿ. ಮಹದೇವಪ್ಪ

ಮೈಸೂರು : ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಟ ನಿರ್ಮಾಪಕ ಉಪೇಂದ್ರ ಜಾತಿ ಹೆಸೆರನ್ನು ಕರೆದಿರುವುದು ಸಂವಿದಾನಕ್ಕೆ ಮಾಡಿದ ಅಪಚಾರ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪೇಂದ್ರ ಒಬ್ಬ ಖ್ಯಾತ ನಟ, ನಿರ್ಮಾಪಕ ಅವರಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು ಬಹಳ ಇದೆ ಅಂದುಕೊಂಡಿದ್ದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ನಟ ಉಪೇಂದ್ರ ಇತ್ತೀಚೆಗೆ ಮಾತಿನ ಬರದಲ್ಲಿ ಊರು ಇದ್ದ ಕಡೆ ಹೊಲಗೇರಿ ಇದ್ದೇ ಇರುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿ ದಲಿತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದರು.

ಇನ್ನೂ ಮೈಸೂರು ವಿವಿಗೆ ಹಂಗಾಮಿ ಕುಲಪತಿ ನೇಮಕ ಕುರಿತು ಮಾತನಾಡಿದ ಅವರು, ಸರ್ಕಾರ ಕೂಡಲೆ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಲಿದೆ. ಖಾಯಂ ಕುಲಪತಿಗಳ ನೇಮಕ ವಿಚಾರದಲ್ಲಿ ಹಿರಿಯರನ್ನು ಪರಿಗಣಿಸಬೇಕಿದೆ. ಇದನ್ನೆಲ್ಲಾ ಮಾಡಲು ಸಚ್೯ ಕಮಿಟಿ ತೀರ್ಮಾನ ಮಾಡಲಿದೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ