ಬೆಳಗಾವಿ : ಕೆಎ 22 ಎಫ್ 2065 ನಂಬರಿನ ಸರ್ಕಾರಿ ಬಸ್ ಕೊಲ್ಲಾಪುರ – ರತ್ನಾಗಿರಿ ಮಧ್ಯೆ ಜಾಧವವಾಡಿ ಸಮೀಪದಲ್ಲಿ ಕಂದಕಕ್ಕೆ ಉರುಳಿ ಬಿದ್ದು ನಂತರ ಹೊತ್ತಿ ಉರಿದಿದೆ. ಬಸ್ ನಲ್ಲಿ 13 ಜನರು ಪ್ರಯಾಣಿಸುತ್ತಿದ್ದು ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಪಾದಚಾರಿಯೊಬ್ಬನನ್ನು ತಪ್ಪಿಸಲು ಹೋಗಿ ಬಸ್ ಉರುಳಿ ಬಿದ್ದಿದ್ದು. ಹಿಂಬದಿಯ ಗ್ಲಾಸ್ ಒಡೆದು ಪ್ರಯಾಣಿಕರನ್ನು ಹೊರಗೆ ತರಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.





