Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ತಾರ ರಾಕಿಂಗ್‌ ಸ್ಟಾರ್?

ಬೆಂಗಳೂರು: ರಾಕಿಂಗ್‌ ಸ್ಟಾರ್‌ ನಟನೆಯ ಟಾಕ್ಸಿಕ್‌ ಸಿನಿಮಾ ಚಿತ್ರೀಕರಣದ ಮೊದಲ ಭಾಗ ಪ್ರಾರಂಭವಾಗಿದ್ದು, ಹಾಲಿವುಡ್‌ ರೇಂಜ್‌ನಲ್ಲಿ ಸಿನಿಮಾ ಮೋಡಿ ಬರುತ್ತಿದೆ. ಟಾಕ್ಸಿಕ್‌  ಚಿತ್ರೀಕರಣದಲ್ಲಿ ಬಿಸಿಯಾಗಿರುವ ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಚಿತ್ರದ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಟಾಕ್ಸಿಕ್‌ ಚಿತ್ರದ ಮೊದಲ ಶೆಡ್ಯೂಲ್‌ ಮುಗಿಯುತ್ತಿದ್ದಂತೆ ಯಶ್‌ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಿವುಡ್‌ ನಿರ್ದೇಶಕ ನಿತೀಶ್‌ ತಿವಾರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ರಾಮಾಯಣ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

2024 ಜುಲೈ ತಿಂಗಳಿಗೆ ಈಗಾಗಲೆ ಅನೌಂನ್ಸ್‌ ಮಾಡಿರುವ ಟಾಕ್ಸಿಕ್‌ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಯಲಿದೆ. ಬಳಿಕ ರಾಮಾಯಣ ಚಿತ್ರದ ರಾವಣ ಪಾತ್ರವನ್ನು ಚಿತ್ರೀಕರಿಸಲಾಗುವುದು ಎಂಬ ಸುದ್ದಿ ಕೇಳಿ ಬಂದಿದೆ.

ಆದರೇ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಅಧಿಕೃತ ಮಾಹಿತಿ ಹೊರಬೀಳುವವರೆಗೆ ಕಾದುನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!