ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್ಎಲ್) ಕಡೆಗೂ ತನ್ನ ಗ್ರಾಹಕರಿಗೆ 5ಜಿ ಸೇವೆ ನೀಡಲು ಮುಂದಾಗಿದೆ. ಬಿಎಸ್‌ಎನ್‌ಎಲ್ ತನ್ನ ಕ್ವಾಂಟಮ್ 5ಜಿ ಸೇವೆಯನ್ನು ಸದ್ದಿಲ್ಲದೆ ಪ್ರಾರಂಭಿಸಿದ್ದು, ದೇಶದ ಆಯ್ದ ನಗರದಲ್ಲಿ ಬಿಎಸ್‌ಎನ್‌ಎಲ್ ತನ್ನ 5ಜಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.
ಇದಕ್ಕೂ ಮುನ್ನ ಬಳಕೆದಾರರ ಸಲಹೆಯ ಮೇರೆಗೆ ಕಂಪೆನಿಯು ತನ್ನ 5ಜಿ ಸೇವೆಗೆ ಕಿ೫ಎ ಅಂದರೆ ಕ್ವಾಂಟಮ್ 5ಜಿ ಎಂದು ಹೆಸರಿಡಲು ನಿರ್ಧರಿಸಿದೆ ಎಂದು ಹೇಳಲಾಗಿದ್ದರೂ ಅದಿನ್ನೂ ವಾಣಿಜ್ಯ ಉದ್ದೇಶದ ಬಳಕೆಗೆ ಆರಂಭಿಸಿಲ್ಲ ಎಂದು ಬಿಎಸ್‌ಎನ್‌ಎಲ್ ಹೇಳಿದೆ.
5ಜಿ ಸೇವೆ ಆರಂಭ: ಬಿಎಸ್‌ಎನ್‌ಎಲ್ ತನ್ನ ಎಕ್ಸ್ ಖಾತೆಯಲ್ಲಿ ಕಂಪೆನಿಯ ಸಿಎಂಡಿ ರಾಬರ್ಟ್ ಜೆ.ರವಿ ಅವರು ಹೈದರಾಬಾದ್‌ನಲ್ಲಿ ಕ್ವಾಂಟಮ್ 5ಜಿ ಊUಅ (ಸ್ಥಿರ ವೈರ್‌ಲೆಸ್ ಆಕ್ಸೆಸ್) ಸೇವೆಯನ್ನು ಆರಂಭಿಸಿರುವುದಾಗಿ ತಿಳಿಸಿದೆ. ಶೀಘ್ರದಲ್ಲೇ ದೇಶದ ಇತರೆ ಆಯ್ದ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗುವುದು. ಈ ಸೇವೆಯ ಮೂಲಕ ಬಿಎಸ್‌ಎನ್‌ಎಲ್ ಬಳಕೆದಾರರು ಸೂಪರ್-ಸ್ಟ್ 5ಜಿ ಇಂಟರ್‌ನೆಟ್ ಸೇವೆಯನ್ನು ಪಡೆಯುತ್ತಾರೆ. ಇದಕ್ಕೂ ಮುನ್ನ ಕಂಪೆನಿಯು ದೇಶದಲ್ಲಿ ತನ್ನ ಜಾಲವನ್ನು ಸುಧಾರಿಸಲು ಒಂದು ಲಕ್ಷ ಹೊಸ 4ಜಿ, 5ಜಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕಾಗಿ ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ. ಕಳೆದ ವರ್ಷ ಬಿಎಸ್‌ಎನ್‌ಎಲ್ ಒಂದು ಲಕ್ಷ 4ಜಿ, 5ಜಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಈ ಪೈಕಿ 7೦ ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದ್ದು, ಅವೆಲ್ಲವೂ ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.





