ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ ಹೆಣ್ಣಿನ ಆಂತರ್ಯದ ಭಾವಜಗತ್ತು ವೈವಿಧ್ಯಮುಂವಾದದ್ದು ಹಾಗೂ ವಿಶಾಲವಾದದ್ದು. ಅವಳ ಬದುಕು ಅನುಭವಗಳ ಮೂಸೆಯಲ್ಲಿ ಕರಗಿದಾಗ ಭಾವನೆಗಳು ಪಕ್ವಗೊಂಡು ಮನೋವಲುಂದಲ್ಲಿ ಭಿನ್ನ ಭಿನ್ನ ರೂಪಗಳನ್ನು ತಳೆಯುತ್ತವೆ. ಹೀಗಾಗಿ ಅವಳ ಅಭಿವ್ಯಕ್ತಿ ಕ್ರಮವೂ ಸಹ ಭಿನ್ನ ಲಯದಲ್ಲಿ ಹೊರಡುತ್ತದೆ. ಅವಳ ಭಾವನೆಗಳು, ಬರಹ, ಭಾಷೆ ಮೊದಲಾದವುಗಳ ಅಭಿವ್ಯಕ್ತಿ ಅವಳ ಅನುಭವ ಕಥನದಿಂದ ಪ್ರಭಾವಿಸಲ್ಪಡುತ್ತವೆ.
ಹೆಣ್ಣಿಗೆ ಸೀಮಿತ ಅರ್ಥವ್ಯಪ್ತಿ ಸ್ತ್ರೀ ಬರಹಗಳನ್ನು ಕೆಲವು ಪುರುಷ ವಿಮರ್ಶಕರು ವಿಮರ್ಶಿಸುವಾಗ ತೀರಾ ಸೀಮಿತ ಅರ್ಥದಲ್ಲಿ ಗುರುತಿಸಿದ್ದಾರೆ. ‘ಹೆಣ್ಣೇನು ಹೆಚ್ಚಿಗೆ ಬರೆುುಂತ್ತಾಳೆ’, ‘ಪ್ರೀತಿ- ಪ್ರೇಮ- ವಿರಹ ಇವುಗಳೇ ಅವಳ ಸಾಹಿತ್ಯದ ವಸ್ತು’,
‘ವೈಚಾರಿಕತೆಯಿಲ್ಲದ ಸಾಹಿತ್ಯ’ ಎನ್ನುತ್ತಾ ಅವಳ ಬರವಣಿಗೆುಂನ್ನು ‘ಅಡುಗೆ ಮನೆುಂ ಸಾಹಿತ್ಯ’ ಎಂಬುದಾಗಿ ಕರೆದು ಒಟ್ಟಂದದಲ್ಲಿ ಸೀಮಿತ ಅರ್ಥವ್ಯಾಪ್ತಿಗೆ ಒಳಗು ವಾಡಿದ್ದಾರೆ. ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ, ಅಡುಗೆ ವಾಡಿ ಬಡಿಸುವುದರೊಂದಿಗೆ, ಪಾಠ ಹೇಳಿಕೊಡುವುದರೊಂದಿಗೆ, ಸಾಕಿ ಸಲಹುವುದರೊಂದಿಗೆ ಪ್ರಾರಂಭವಾಗುವಾಗ ಅವಳ ಅಡುಗೆ, ಮನೆಗೆಲಸಗಳು ಅದು ಹೇಗೆ ಮಹತ್ವ ಪಡೆಯಲಾರವೋ ತಿಳಿಯದು.ನಿನಗೇನು ಗೊತ್ತಾಗುತ್ತದೆ ಎನ್ನುತ್ತಾರೆ ಅಡುಗೆ ದೊಡ್ಡ ಮಟ್ಟದ್ದಾಗಿದ್ದು ಆದಾಗ ಬರುವಂತಿದ್ದರೆ ಅದಕ್ಕೆ ಮಹತ್ವ, ಸಣ್ಣ ಮಟ್ಟದ್ದಾದರೆ ಅದು ಹೆಣ್ಣಿಗೆ ಮೀಸಲು. ಕೊನೆಗೆ ಪುರುಷಾಧಿಕಾರವನ್ನು ಪ್ರಶ್ನಿಸುವ ಹೆಣ್ಣು ಉನ್ನತ ಹುದ್ದೆಯಲ್ಲಿದ್ದರೂ ಅವಳನ್ನು ರಾಜೀನಾಮೆ ನೀಡಿ ಅಡುಗೆ ವಾಡಿಕೊಂಡಿರಲಿ ಎನ್ನುವಾಗ ಗಂಡಿಗೆ ಯಾವ ಹಿಂಜರಿಕೆಯೂ ಇಲ್ಲ.
ಪ್ರಸಿದ್ಧ ಲೇಖಕಿ ವೈದೇಹಿುಂವರು ‘ಅಡುಗೆ ಮನೆಯ ಹುಡುಗಿ’ ಕವಿತೆಯಲ್ಲಿ ಹೆಣ್ಣೊಬ್ಬಳ ಕನಸುಗಳು ಅಡುಗೆ ಮನೆಯಲ್ಲೆ ಕರಗಿಹೋಗುತ್ತವೆ.ಕುಟುಂಬದ ವ್ಯವಹಾರಗಳಲ್ಲಿ ಮಧ್ಯೆ ತಲೆ ಹಾಕುವ ಹೆಣ್ಣಿಗೆ ‘ಅ್ಂಯೋ ನಿನಗೇನು ಗೊತ್ತಾಗುತ್ತದೆ, ಒಲೆ ಮೇಲೆ ಹುಳಿ, ಉಪ್ಪು ಖಾರ ಹುಳಿ ಸರಿಯಾಗಿ ಬೆಂದಿಯೇ ನೋಡು ಹೋಗು’ ಎನ್ನುವ ಪ್ರತಿಕ್ರಿಯೆಗಳು ಸಾಕಷ್ಟಿವೆ. ಇಂತಹ ಅನುಭವಗಳು ಬದುಕಿನುದ್ದಕ್ಕೂ ಹಾಸುಹೊಕ್ಕಾಗಿದ್ದರೂ ಅನಾರೋಗ್ಯವಿರಲಿ, ಮನಸ್ಥಿತಿ ಸರಿಯಿಲ್ಲದಿರಲಿ, ಎಂತಹ ಕಠಿಣ ಪರಿಸ್ಥಿುಂಲ್ಲೂ ಗಂಡಿಗೆ ಪ್ರಿಯವಾದದ್ದನ್ನೆ ತಾಳ್ಮೆಯಿಂದ ವಾಡಿ ಉಣಬಡಿಸುವ ಹೆಣ್ಣು ಅಡುಗೆ ಮನೆಯನ್ನು ಹೊರತುಪಡಿಸಿ ಬರೆಯಲಾದೀತೆ?!
ದೌರ್ಜನ್ಯ ಕಾವ್ಯವಾಗುತ್ತದೆ ಗಂಡ-ಮನೆ-ಮಕ್ಕಳು ಎಂದು ಕೌಟುಂಬಿಕ ಕಾಳಜಿಗಳು, ಹೊರಗೆ ದುಡಿಯುತ್ತಿದ್ದರೆ ಆ ಸಮಯ ಹಾಗೂ ಹೊರಗಿನ ಒತ್ತಡಗಳು ಅಂತಹ ಎಲ್ಲ ಅವಕಾಶಗಳನ್ನು ಕಸಿದುಕೊಂಡಿವೆ.ಪ್ರೀತಿ ಪ್ರೇಮ ವಿರಹ ಪುರುಷಾಳ್ವಿಕೆಯ ದೌರ್ಜನ್ಯ ತಾನು ಕಂಡುಂಡ ಬವಣೆ….ಹೀಗೆ ಹೆಣ್ಣಿನ ಲೇಖನಿ ಮೂಲಕ, ಕಾವ್ಯವಾಗಿ, ಕಾದಂಬರಿಯಾಗಿ ಮೈದಳೆಯುತ್ತವೆ. ಇಂತಹ ಭಾವನೆಗಳು ಪ್ರತಿ ಮನುಷ್ಯನಲ್ಲಿ ಕಂಡುಬರುವ ಮನೋವ್ಯಾಪಾರವಾಗಿದೆ. ‘ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ, ಮೋಡ ಕಟ್ಟೀತು ಹೇಗೆ’ ಎಂದು ಜಿ.ಎಸ್.ಶಿವರುದ್ರಪ್ಪನವರು ಪ್ರೀತಿ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಪ್ರೀತಿ ಮೊದಲಾದ ಮೌಲ್ಯಗಳು ಜಗತ್ತನ್ನು ಜೀವಂತವಾಗಿರಿಸಿವೆ. ಹೆಣ್ಣು ಭಾವುಕ ಲೋಕದ ವಿಹಾರಿಾಂದ್ದರಿಂದ ಪ್ರೀತಿ, ಪ್ರೇಮ ಅವಳಿಗೆ ವ್ಯವಹಾರಿಕ ಪ್ರಜ್ಞೆ ಯಾಗಲಾರದು.ಪ್ರೀತಿ ಅನುಭವದಲ್ಲಿ ಸಂತೋಷ, ದುಃಖ, ವಿರಹ, ಕಣ್ಣೀರು ಎಲ್ಲವೂ ಬಂದು ಹೋಗುವುದಾದರೆ ಒಂದು ಹೆಣ್ಣು ಅದನ್ನು ತನ್ನ ಬರವಣಿಗೆುಂಲ್ಲಿ ಪ್ರಕಟಿಸಬಲ್ಲಳು. ಪುರುಷ ಪ್ರಧಾನ ವ್ಯವಸ್ಥೆುಂಲ್ಲಿ ಗಂಡನ್ನು ಹೆಣ್ಣಿನಂತೆ ದುಃಖಿಸುತ್ತಾನೆ, ಅಳುತ್ತಾನೆ ಎಂದು ಛೇಡಿಸಿದರೆ ಅದು ಅವನ ಆತ್ಮ ಗೌರವಕ್ಕೆ ಧಕ್ಕೆಾಂಗುತ್ತದಲ್ಲ! ಅದಕ್ಕಾಗಿಯೇ ಅವನಿಗೆ ಅವೆಲ್ಲವೂ ಅವನಿಗೆ ಅಷ್ಟಾಗಿ ತಟ್ಟಲಾರವು. ನಗುವ ಹಕ್ಕನ್ನು ಗಂಡಿಗೂ, ಅಳುವ ಹಕ್ಕನ್ನು ಹೆಣ್ಣಿಗೆ ನೀಡಿದ್ದು ಇದು ಅದಲು ಬದಲಾದರೆ ‘ನಗೋ ಹೆಂಗಸನ್ನು ಅಳೋ ಗಂಡಸನ್ನು ನಂಬಬೇಡ’ ಎಂಬ ಲೋಕವಾಣಿ ಬೇರೆ ಹುಟ್ಟಿಕೊಂಡಿದೆ.ವಿಧವೆಯಾಗಿ ಒಂಟಿ ಬದುವೆಸುತ್ತಿರುವ ಅಸಂಖ್ಯಾತ ಹೆಣ್ಣು ಮಕ್ಮಳು ನಮಗೆ ಕಾಣಸಿಗುತ್ತಾರೆ. ಆದರೆ, ವಿಧುರನಾಗಿ ಒಂಟಿ ಬದುಕನ್ನು ಬದುಕುವ ಗಂಡನ್ನು ಬೂತಗನ್ನಡಿಯಲ್ಲಿ ಹುಡುಕಬೇಕಾಗಿದೆ. ಇಂತಹ ತಾರತಮ್ಯವನ್ನು ಅನುಭವಿಸುತ್ತ ಹೆಣ್ಣು ತನ್ನ ಭಾವನಾತ್ಮಕ ಮನಸ್ಥಿುಂನ್ನು ಸಾಹಿತ್ಯದಲ್ಲಿ ತೆರೆದಿಟ್ಟರೆ ಅದು ಕೀಳೆಂದು ಭಾವಿಸುವ ಅಗತ್ಯವಿಲ್ಲ.
– ಡಾ.ಎನ್.ರಮ್ಯಾ, ಉಪನ್ಯಾಸಕರು, ಕನ್ನಡ ವಿಭಾಗ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಮಂಡ್ಯ.