ವಿನೋದ್ ಪ್ರಭಾಕರ್ ನಟಿಸುತ್ತಿರುವ ಚಿತ್ರ ಮಾದೇವ. ಈ ಚಿತ್ರದಲ್ಲಿ ಅವರ ಜೋಡಿಯಾಗಿ ಸೋನಲ್ ಮೊಂತೆರೊ ನಟಿಸುತ್ತಿದ್ದಾರೆ. ಹಿಂದೆ ಈ ಜೋಡಿ ರಾಬರ್ಟ್ ಚಿತ್ರದಲ್ಲಿ ನಟಿಸಿತ್ತು.
ನವೀನ್ ಬಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಅವರದು ೮೦ರ ದಶಕದ ಮಧ್ಯಮವರ್ಗದ ಹುಡುಗಿಯ ಪಾತ್ರ. ೮೦ ದಶಕದ್ದು ಎನ್ನಲಾದ ಈ ಕಥೆ ರೈಲು ಮತ್ತು ಜೈಲಿನ ಹಿನ್ನೆಲೆಯದು ಎನ್ನಲಾಗಿದ್ದು, ವಿನೋದ್ ಪ್ರಭಾಕರ್ ಅವರದು ಈ ಹಿಂದಿನ ಚಿತ್ರದವುಗಳಿಗಿಂತ ಭಿನ್ನವಾದ ಪಾತ್ರ ಎನ್ನುತ್ತಿದೆ ಚಿತ್ರತಂಡ. ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ಬಾಲಕೃ?್ಣ ತೋಟ ಛಾಯಾಗ್ರಹಣ, ಪ್ರದ್ಯೋಥನ್ ಸಂಗೀತ ಸಂೋಂಜನೆ ಇದೆ. ಗಾಯತ್ರಿ ರಾಜೇಶ್ ಹಾಗೂ ?ಲವ್ ಗುರು? ಖ್ಯಾತಿಯ ಸುಮಂತ್, ?ಮಾದೇವ? ಚಿತ್ರದ ನಿರ್ಮಾಪಕರು.