‘ಆರ್‌ಎಂ’! ಇದು ಚಿತ್ರವೊಂದರ ಹೆಸರು. ಕನ್ನಡ ಚಿತ್ರ. ರಕ್ಷಿತಾ ಮಂಜುಳ ಹೆಸರುಗಳ ಸಂಕ್ಷಿಪ್ತ ರೂಪ!
ಓ.ವಿ.ಎಂ. ಮೂವೀಸ್ ಮೂಲಕ ಭರತ್ ಕುಮಾರ್ ಚಂದ್ರಶೇಖರ್ ಹೂಗಾರ್ ನಿರ್ಮಿಸಲಿರುವ ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇಬ್ಬರು ಯುವತಿಯರು ಹಾಗೂ ಯುವಕನೊಬ್ಬನ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡ ಈ ಪ್ರೇಮಕಥೆಯನ್ನು ದೇವು ನಿರ್ದೇಶಿಸಲಿದ್ದಾರೆ. ಈ ಚಿತ್ರದ ಮುಹೂರ್ತ ಗದುಗಿನ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ನಡೆಸಲಾಗುವುದು. ಬೆಂಗಳೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಗದಗ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣವನ್ನು ನಡೆಸುವ ೋಂಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.