ನಿರ್ದೇಶಕ ಸತ್ಯಪ್ರಕಾಶ್ ಈಗ ನಿರ್ಮಾಪಕರೂ ಹೌದು. ಅವರ ನಿರ್ಮಾಣದ ಹೊಸ ಚಿತ್ರದ ಸುದ್ದಿ ಬಂದಿದೆ. ಇತ್ತೀಚೆಗೆ ಅವರು ನಿರ್ದೇಶಿಸಿ, ಮಯೂರ ಪಿಕ್ಚರ್ಸ್ ಜೊತೆ ಸೇರಿ ನಿರ್ಮಿಸಿದ ಚಿತ್ರ ‘ಮ್ಯಾನ್ ಆಫ್ ದಿ ಮ್ಯಾಚ್’. ಈಗ ಅದೇ ಸಂಸ್ಥೆಯ ಜೊತೆ ಸೇರಿ ಹೊಸ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಚಿತ್ರದಲ್ಲಿ ಈಗಾಗಲೇ ‘ವೀಕೆಂಡ್’ ಚಿತ್ರದಲ್ಲಿ ನಟಿಸಿದ್ದ ಮಿಲಿಂದ್ ಮುಖ್ಯಪಾತ್ರಧಾರಿಯಾಗಿದ್ದು, ಅವರ ಜೋಡಿಯಾಗಿ, ‘ಲವ್ ಮಾಕ್ವೆಲ್’ನ ರಚೆಲ್ ಡೇವಿಡ್ ಅಭಿನಯಿಸಲಿದ್ದಾರೆ.
ಸತ್ಯಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದರೆ, ದೀಪಕ್ ಮಧುವನಹಳ್ಳಿ ಅದನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂೋಂಜನೆ, ಲವಿತ್ ಛಾಯಾಗ್ರಹಣ, ಅಜಯ್ ಸಂಕಲನ ಇರಲಿದೆ.