Mysore
26
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಆಹಾರ ಭದ್ರತೆಗಾಗಿ ರಾಷ್ಟ್ರವ್ಯಾಪಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’

ಆಧುನಿಕ ಕೃಷಿ ಪದ್ಧತಿಗಳ ಮೂಲಕ ಸಮೃದ್ಧ ರೈತರನ್ನು ಒಳಗೊಂಡ ಅಡಿಪಾಯವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕೈಗೊಂಡಿದೆ.

ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿರುವ ಕೃಷಿಯು ದೇಶದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಜೀವನೋಪಾಯವನ್ನು ಒದಗಿಸುವುದಲ್ಲದೆ, ರಾಷ್ಟ್ರೀಯ ಆಹಾರ ಭದ್ರತೆಗೂ ತಳಹದಿಯಾಗಿದೆ. ಭಾರತವನ್ನು‘ವಿಶ್ವದ ಆಹಾರ ಬುಟ್ಟಿ’ ಯನ್ನಾಗಿಸುವ ದೃಷ್ಟಿಕೋನದೊಂದಿಗೆ, ಕೈಗೊಂಡಿರುವ ಈ ಅಭಿಯಾನವು ಸುಸ್ಥಿರ ಕೃಷಿ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅಂತಾರಾಷ್ಟ್ರೀಯ ಆಹಾರ ಸಹಕಾರವನ್ನು ಬಲಪಡಿಸಲು ಪ್ರಯತ್ನಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದ ೧೪೫ ಕೋಟಿ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಕೃಷಿ ಮತ್ತುರೈತ ಕಲ್ಯಾಣ ಸಚಿವಾಲಯದ ಪ್ರಾಥಮಿಕ ಉದ್ದೇಶವಾಗಿದೆ. ಜೊತೆಗೆ ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿಪಡಿಸುವುದು, ರೈತರ ಆದಾಯವನ್ನು ಸುಧಾರಿಸುವುದು ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದಲ್ಲಿ ಸೇರಿದೆ.

ಈ ಆಂದೋಲನವನ್ನು ಖಾರಿಫ್ ಮತ್ತು ರಾಬಿ ಬೆಳೆಗಳಿಗೆ ಬಿತ್ತನೆ ಆರಂಭಕ್ಕೆ ಮುಂಚೆ ಪ್ರತಿವರ್ಷ ನಡೆಸಲು ಉದ್ದೇಶಿಸಲಾಗಿದೆ. ಈ ಗುರಿಗಳನ್ನು ಪೂರೈಸಲು, ಕೇಂದ್ರ ಕೃಷಿ ಸಚಿವಾಲಯವು ಆರು ಅಂಶಗಳ ಕಾರ್ಯತಂತ್ರವನ್ನು ರೂಪಿಸಿದೆ:

೧.ಉತ್ಪಾದನೆಯನ್ನು ಹೆಚ್ಚಿಸುವುದು.

೨.ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು.

೩.ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸುವುದು.

೪.ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸುವುದು.

೫.ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣೆಯೊಂದಿಗೆ ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವುದು.

೬.ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು.

‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’

ಐಸಿಎಆರ್‌ನ ೧೧೩ ಸಂಶೋಧನಾ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರಿ ಇಲಾಖೆಗಳು, ಅನ್ವೇಷಣಾಸಕ್ತ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒಗಳು) ಸೇರಿದಂತೆ ವಿವಿಧ ಕೃಷಿ ಸಂಸ್ಥೆಗಳ ಸಹಯೋಗದಲ್ಲಿ ಖಾರಿಫ್ ಮತ್ತು ರಾಬಿ ಬೆಳೆಗಳ ಬಿತ್ತನೆ ಋತುಗಳಿಗೆ ಮುಂಚಿತವಾಗಿ ನಡೆಯಲಿದೆ.

ದೇಶದಲ್ಲಿ ಪ್ರಸ್ತುತ ಸುಮಾರು ೧೬,೦೦೦ ಕೃಷಿ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿ ಕೊಂಡಿದ್ದು, ಈ ಅಭಿಯಾನವು ರೈತರಿಗೆ ಅವರ ಕೆಲಸವನ್ನು ನೇರವಾಗಿ ತಲುಪಿಸುವ ಮತ್ತು ಉಪಯುಕ್ತವಾಗಿಸುವ ಗುರಿಯನ್ನು ಹೊಂದಿದೆ.

ಈ ಅಭಿಯಾನದ ಭಾಗವಾಗಿ, ಕನಿಷ್ಠ ನಾಲ್ವರು ವಿಜ್ಞಾನಿಗಳನ್ನು ಒಳಗೊಂಡ ೨,೧೭೦ ತಜ್ಞರ ತಂಡಗಳು ಮೇ ೨೯ ರಿಂದ ಜೂನ್ ೧೨ ರವರೆಗೆ ೭೨೩ ಜಿಲ್ಲೆಗಳಲ್ಲಿ ೬೫,೦೦೦ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಲಿವೆ. ಈ ತಂಡಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಅನ್ವೇಷಣಾಸಕ್ತ ರೈತರು ಮತ್ತು ಎಫ್‌ಪಿಒಗಳ ಸಿಬ್ಬಂದಿ ಸೇರಿರುತ್ತಾರೆ.ಅವರು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ರೈತರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವ ದೈನಂದಿನ ಅಧಿವೇಶನಗಳನ್ನು ನಡೆಸುತ್ತಾರೆ.

ತಂಡಗಳು ಸ್ಥಳೀಯ ಕೃಷಿ-ಹವಾಮಾನ ಪರಿಸ್ಥಿತಿಗಳು, ಮಣ್ಣಿನ ಪೋಷಕಾಂಶಗಳ ಪ್ರೊಫೈಲ್‌ಗಳು, ನೀರಿನ ಲಭ್ಯತೆ ಮತ್ತು ಮಳೆಯ ಮಾದರಿಗಳನ್ನು ಮೌಲ್ಯಮಾಪನ ಮಾಡುತ್ತವೆ. ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಬಳಸಿಕೊಂಡು, ಅವರು ಸೂಕ್ತವಾದ ಬೆಳೆಗಳು, ಹೆಚ್ಚಿನ ಇಳುವರಿ ಬೀಜ ಪ್ರಭೇದಗಳು, ಆದರ್ಶ ಬಿತ್ತನೆ ತಂತ್ರಗಳು ಮತ್ತು ಸಮತೋಲಿತ ರಸಗೊಬ್ಬರ ಬಳಕೆಯನ್ನು ಶಿಫಾರಸು ಮಾಡುತ್ತಾರೆ, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ವೈಜ್ಞಾನಿಕ ಕೃಷಿಗೆ ಒತ್ತು ನೀಡುತ್ತಾರೆ.

ಮುಖ್ಯವಾಗಿ, ಈ ಅಭಿಯಾನವನ್ನು ದ್ವಿಮುಖ ಸಂವಾದವಾಗಿ ವಿನ್ಯಾಸಗೊಳಿಸಲಾಗಿದೆ. ರೈತರು ತಮ್ಮ ಸವಾಲುಗಳನ್ನು ಹಂಚಿಕೊಳ್ಳುತ್ತಾರೆ, ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಕೀಟಬಾಧೆಯಂತಹ ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ವರದಿ ಮಾಡುತ್ತಾರೆ, ಇದು ಭವಿಷ್ಯದ ಸಂಶೋಧನಾ ಮಾರ್ಗಗಳನ್ನು ತಿಳಿಸುತ್ತದೆ.

ಆಹಾರ ಧಾನ್ಯ ಉತ್ಪಾದನೆ ದಾಖಲೆಯ ಏರಿಕೆ”

“ಭಾರತ ಈ ವರ್ಷ ದಾಖಲೆಯ ಕೃಷಿ ಉತ್ಪಾದನೆಯನ್ನು ಸಾಧಿಸಿದೆ. ಖಾರಿಫ್ ಅಕ್ಕಿ ಉತ್ಪಾದನೆ ೧೨೦೬.೭೯ ಲಕ್ಷ ಮೆಟ್ರಿಕ್ ಟನ್, ಗೋಧಿ ೧೧೫೪.೩೦ ಲಕ್ಷ ಮೆಟ್ರಿಕ್ ಟನ್, ಖಾರಿಫ್ ಮೆಕ್ಕೆಜೋಳ ೨೪೮.೧೧ ಲಕ್ಷ ಮೆಟ್ರಿಕ್ ಟನ್, ನೆಲಗಡಲೆ ೧೦೪.೨೬ ಲಕ್ಷ ಮೆಟ್ರಿಕ್ ಟನ್ ಮತ್ತು ಸೋಯಾಬೀನ್ ೧೫೧.೩೨ ಲಕ್ಷ ಮೆಟ್ರಿಕ್ ಟನ್ ಆಗಿದೆ. ಈ ಸಾರ್ವಕಾಲಿಕ ಗರಿಷ್ಟ ಅಂಕಿಅಂಶಗಳು ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸುತ್ತವೆ. ಒಟ್ಟು ಆಹಾರ ಧಾನ್ಯ ಉತ್ಪಾದನೆಯು ೨೦೨೩-೨೪ರಲ್ಲಿ ೩೧೫೭.೭೪ ಲಕ್ಷ ಟನ್‌ಗಳಿದ್ದದ್ದು ೨೦೨೪-೨೫ರಲ್ಲಿ ೩೩೦೯.೧೮ ಲಕ್ಷ ಟನ್‌ಗಳಿಗೆ ಏರಿದೆ. ಇದಲ್ಲದೆ, ದ್ವಿದಳ ಧಾನ್ಯಗಳ ಉತ್ಪಾದನೆಯು ೨೨೧.೭೧ ರಿಂದ ೨೩೦.೨೨ ಲಕ್ಷ ಟನ್‌ಗಳಿಗೆ ಏರಿದೆ. ಎಣ್ಣೆಬೀಜಗಳು ೩೮೪ ರಿಂದ ೪೧೬ ಲಕ್ಷ ಮೆಟ್ರಿಕ್ ಟನ್‌ಗಳಿಗೆ ಏರಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಂಕಿ ಅಂಶ ನೀಡಿದೆ”

Tags:
error: Content is protected !!