Light
Dark

ಸಿನಿಮಾಲ್‌ : ಗೂಗಲ್ ನಂತರ ಈಗ ’ವಿಕಿಪೀಡಿಯ’

ನಾಲ್ಕು ವರ್ಗಳ ಹಿಂದೆ ಗೂಗಲ್ ಹೆಸರಿನ ಚಿತ್ರವೊಂದು ತೆರಕಂಡಿತ್ತು. ಸಂಗೀತ ಸಂಯೋಜಕ ನಾಗೇಂದ್ರಪ್ರಸಾದ್ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ ಚಿತ್ರವದು. ಗೂಗಲ್ ನೆನಪಾಗಲು ಕಾರಣ ವಿಕಿಪೀಡಿಯ. ಇದು ಈಗ ಸಿದ್ಧವಾಗಿ, ಪ್ರಮಾಣಪತ್ರ ಪಡೆದು ತೆರೆಗೆ ಬರಲು ಕಾದಿರುವ ಚಿತ್ರ. ರಫ್ ಕಟ್ ಪ್ರೊಡಕ್ಷನ್ ಸಂಸ್ಥೆಗಾಗಿ ಈ ಚಿತ್ರವನ್ನು ನಿರ್ದೇಶಿಸಿದವರು ಸೋಮು ಹೊಯ್ಸಳ. ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಅದಾಗಲೇ ಪ್ರಚಾರದ ಕೆಲಸ ಆರಂಭವಾಗಿದೆ. ಕಿರುತೆರೆಯ  ಸತ್ಯಂ ಶಿವಂ ಸುಂದರಂ, ಒಂದೂರಲ್ಲಿ, ರಾಜರಾಣಿ, ಮಹಾದೇವಿ, ಶಾಂತಂ ಪಾಪಂ, ಯಾರೇ ನೀ ಮೋಹಿನಿ ಸೇರಿದಂತೆ ಹಲವು ಸರಣಿಗಳಲ್ಲಿ ನಟಿಸಿರುವ ಯಶವಂತ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಅವರ ಜೋಡಿಯಾಗಿ ಆಶಿಕಾ ಸೋಮಶೇಖರ್ ನಟಿಸಿದ್ದಾರೆ.

ಚಿದಾನಂದ್ ಹೆಚ್ ಕೆ ಛಾಯಾಗ್ರಹಣ, ರಾಕೇಶ್ ಮತ್ತು ನಿಲೀಮ ರಾವ್ ಸಂಗೀತ ಸಂಯೋಜನೆ, ರವಿಚಂದ್ರನ್ ಸಿ ಸಂಕಲನ ವಿಕಿಪೀಡಿಯ ಚಿತ್ರಕ್ಕಿದೆ,

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ