ಮೈಸೂರು : ಮೈಸೂರಿನಲ್ಲಿ ನಡೆಯುತ್ತಿರುವ ಯುವಜನ ಕಾರ್ಯಕ್ರಮದ ಹಿನ್ನಲೆ ರಾಕಿಂಗ್ ಸ್ಟಾರ್ ಯಶ್ ಮೈಸೂರಿಗೆ ಭೇಟಿ ನೀಡಿದ್ದಾರೆ.
ಯುವಜನ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಯಶ್ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ನನ್ನ ಹುಟ್ಟೂರು, ನಾನು ಆಟವಾಡಿ ಬೆಳೆದ ಊರು. ನನ್ನ ಸ್ನೇಹಿತರು ಸಿಗುತ್ತಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ನಾನು ಇಲ್ಲಿಗೆ ಬಂದಿರುವುದು ನನಗೆ ಬಹಳ ಖುಷಿಯಿದೆ. ಆದರೆ, ದಸರಾ ಸಮಯದಲ್ಲಿ ಬರಲು ಆಗುವುದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.
ಹೊಸ ಹೇರ್‌ಸ್ಟೈಲ್ ಬಗ್ಗೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಶ್ ಹೊಸ ಹೇರ್ ಸ್ಟೈಲ್ ಬಗ್ಗೆ ನಿಮಗೆ ಕುತೂಹಲವಿರಲಿ, ಯಾವ ಸಿನ್ಮಾ, ಯಾವ ಸ್ಟೈಲ್ ಎಂಬುದರ ಬಗ್ಗೆ ಕಾದು ನೋಡಿ ಎಂದು ಜಾಣ್ಮೆಯ ಉತ್ತರ ನೀಡಿದರು.