ತಾಯಿಯ ಸಾವಿನ ನೋವಿನಲ್ಲಿರುವ ನಟ ವಿನೋದ್ ರಾಜ್ ಅವರು ತಮ್ಮ ಮಗನ್ನು ದೂರ ಇಟ್ಟಿದ್ದ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಮಗನನ್ನು ಇಷ್ಟು ವರ್ಷಗಳ ಕಾಲ ಯಾಕೆ ದೂರ ಇರಿಸಿದ್ದರು ಎಂಬುದನ್ನು ಬಹಿರಂಗ ಪಡಿಸಿರುವ ವಿನೋದ್ ರಾಜ್ ನನ್ನ ತಾಯಿ ನನ್ನನ್ನು ಹೇಗೆ ತಿದ್ದಿ ಪಾಠ ಹೇಳಿ ಬೆಳೆಸಿದ್ದರೋ ಅದೇ ರೀತಿ ನನ್ನ ಪತ್ನಿ ಕೂಡ ನನ್ನ ಮಗನನ್ನು ಬೆಳೆಸಿದ್ದಾರೆ. ಚೆನ್ನೈನಲ್ಲಿ ಇದ್ದರೂ ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ. ಇಲ್ಲಿದ್ದಾಗ ಮಗ ಹಾಗೂ ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ಅವರನ್ನು ಮದ್ರಾಸ್ ನಲ್ಲಿ ಇರಿಸಿದ್ದರು. ಮಗನ ವಿದ್ಯಾಭ್ಯಾಸಕ್ಕಾಗಿ ಅವನನ್ನು ನಮ್ಮಿಂದ ದೂರ ಇಟ್ಟಿದ್ದೆವು. ಅದರಂತೆ ಈಗ ನನ್ನ ಮಗ ಚೆನ್ನಾಗಿ ಓದಿ ಕೆಲಸದಲ್ಲಿ ಇದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ ಎಂದಿದ್ದಾರೆ.
ತಮ್ಮ ತಾಯಿ ಲೀಲಾವತಿ ಅವರ ಬಗ್ಗೆ ಮಾತನಾಡಿರುವ ನಟ ವಿನೋದ್ ರಾಜ್ ತಮ್ಮ ತಾಯಿಯ ಕೊನೆಯ ಆಸೆ ಏನಾಗಿತ್ತು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ನನ್ನ ತಾಯಿಗೆ ದೇವಸ್ಥಾನಗಳಿಗೆ ಭೇಟಿ ನೀಡುವ ಆಸೆ ಇತ್ತು. ಎಂದಿದ್ದಾರೆ.
ಅಮ್ಮನಿಗೋಸ್ಕರ ಗುಡಿ ಕಟ್ಟಲೇ ಬೇಕು. ಇದರ ಬಗ್ಗೆ ಯೋಚಿಸಿ ಮಾಡುತ್ತೇವೆ ಅಮ್ಮನ ಸ್ಮಾರಕ ಮಾಡುವ ಚಿಂತನೆ ಇದೆ ಎಂದಿದ್ದಾರೆ.
ವಯೋ ಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿಯವರು ಮೊನ್ನೆ ಇಹಲೋಕ ತ್ಯಜಿಸಿದ್ದರು. ನಟಿ ಲೀಲಾವತಿಯವರನ್ನು ಅವರ ಅಂತ್ಯಕ್ರಿಯೆಯನ್ನು ಬೆಂಗಳೂರು ಹೊರವಲಯದ ನೆಲಮಂಗಲದ ಸೋಲದೆವನಹಳ್ಳಿಯಲ್ಲಿರುವ ಅವರ ನೆಚ್ಚಿನ ತೋಟದಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಚಿತ್ರರಂಗದ ಹಲವು ನಟ ನಟಿಯರು ಹಾಗೂ ರಾಜಕೀಯ ಗಣ್ಯರು ಮೇರು ಕಲಾವಿದೆ ಲೀಲಾವತಿಯವರ ಅಂತಿಮ ದರ್ಶನ ಪಡೆದರು.