Mysore
23
broken clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಾಸುಕಿ ವೈಭವ್‌

ಸ್ಯಾಂಡಲ್ವುಡ್‌ ಗಾಯಕ, ನಟ, ಬಿಗ್‌ ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಬೃಂದಾ ವಿಕ್ರಮ್‌ ಜೊತೆಗೆ ಹಸೆಮಣೆ ಏರಿದ್ದಾರೆ.

ವಾಸುಕಿ ವೈಭವ್‌ ಹಾಗೂ ಬೃಂದಾ ವಿಕ್ರಮ್‌ ಇಬ್ಬರೂ ಕೂಡ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಾಸುಕಿ ವೈಭವ್‌ ಅವರು ಈವರೆಗೂ ಮದುವೆಯ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಯುಟ್ಯೂಬ್‌ ಚಾನೆಲ್‌ವೊಂದಕ್ಕೆ ಟಗರು ಪಲ್ಯ ಸಿನಿಮಾದ ಕುರಿತು ಸಂದರ್ಶನ ನೀಡುವ ವೇಳೆಯಲ್ಲಿ, ನಟಿ ಶೃತಿ ಅವರು ಬಾಯಿತಪ್ಪಿ ವಾಸುಕಿ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದರು.

ಬೃಂದಾ ಅವರು ನಾಚಿಕೆ ಸ್ವಭಾವದವರಾಗಿರುವುದರಿಂದ ಮಾಧ್ಯಮಗಳ ಮುಂದೆ ಬರಲು ಹಿಂಜರಿಯುತ್ತಾರೆ.ಹೀಗಾಗಿ ಮದುವೆ ವಿಚಾರವನ್ನು ಖಾಸಗಿಯಾಗಿ ಇಟ್ಟಿದ್ದೇವೆ ಎಂದು ವಾಸುಕಿ ಹೇಳಿಕೊಂಡಿದ್ದಾರೆ.

ನನ್ನ ಜೀವನದ ಪ್ರೀತಿಯನ್ನು ಮದುವೆಯಾಗುತ್ತಿದ್ದೇನೆ. ಇದಕ್ಕಿಂತ ಉತ್ತಮವಾದುದ್ದು ಏನಿದೆ. ಇದು ಎಂದೆಂದಿಗೂ ಅತ್ಯುತ್ತಮ ಫೀಲಿಂಗ್‌ ಎಂದು ವಾಸುಕಿ ವೈಭವ್‌ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!