Mysore
22
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ನ. 4 : ʼಶಾಕುಂತಲೆʼಯಾಗಿ ಬರ್ತಿದ್ದಾಳೆ ನಟಿ ಸಮಂತಾ!

ಚೆನ್ನೈ : ಖ್ಯಾತ ನಟಿ ಸಮಂತಾ ಅವರು ನಟಿಸಿರುವ ಪೌರಾಣಿಕ ಕಥೆಯನ್ನು ಒಳಗೊಂಡ ಸಿನಿಮಾ ʼಶಾಕುಂತಲಂʼ ಬರುವ ನವೆಂಬರ್‌  ತಿಂಗಳಿನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.
ನಟಿ ಸಮಂತಾ ಅವರಿಗೆ ನಾಯಕ ನಟ ರುತ್‌ ಪ್ರಭು ಅವರು ಜೋಡಿಯಾಗಿರುವ ಈ ಸಿನಿಮಾದ ಬಗ್ಗೆ ಸ್ವತಃ ಸಮಂತಾ ಅವರೇ ಟ್ವೀಟ್‌ ಮಾಡಿದ್ದು ” ಪ್ರೇಮ ಮಹಾಕಾವ್ಯ ಶಾಕುಂತಲಂ 2022ರ ನವೆಂಬರ್‌ 4 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದುವರಿದು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ʼನಿಮ್ಮ ಪ್ರೀತಿಗೆ ಧನ್ಯವಾದಗಳು, ಯಾವಾಗಲೂ ನಿವೇ ನನ್ನ ಶಕ್ತಿʼ ಎಂದು ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.
ಈ ಸಿನಿಮಾವನು ನಿರ್ದೇಶಕ ಗುಣಶೇಖರ್‌ ಅವರು ನಿರ್ದೇಶನ ಮಾಡಿದ್ದು, ಶಾಕುಂತಲೆಯ ನಾಟಕ ಆಧಾರಿತವಾದ ಸಿನಿಮಾ ಇದಾಗಿದೆ. ದುಷ್ಯಂತ ಪಾತ್ರದಲ್ಲಿ ದೇವ್‌ ಮೋಹನ್‌ ರವರು ಕಾಣಿಸಿಕೊಳ್ಳಲಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!