Mysore
21
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಬಿಗ್ ಬಾಸ್: ಪಕ್ಷ ಬದಲಿಸಿದ ಸಂಗೀತಾಗೆ ಪಾಠ ಕಲಿಸಿದ ವೀಕ್ಷಕರು; ಹೀಗೆ ಆಗಬಾರದಿತ್ತು

ಸದ್ಯ ಹತ್ತನೇ ಆವೃತ್ತಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಸಾಲು ಸಾಲು ಜಗಳ, ಕಿತ್ತಾಟಗಳಿಂದಲೇ ಹೆಚ್ಚು ಸುದ್ದಿಗೀಡಾಗಿದೆ. ಕಳೆದ ಬಾರಿಯ ಸೀಸನ್‌ಗಳಲ್ಲಿ ಇಲ್ಲದೇ ಇದ್ದಷ್ಟು ಗುಂಪುಗಾರಿಕೆ, ಕುತಂತ್ರ ಈ ಬಾರಿ ಇರುವುದೇ ಬಿಗ್ ಬಾಸ್ ಇತಿಹಾಸದಲ್ಲಿಯೇ ಈ ಆವೃತ್ತಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ಕಾರಣವಾಗಿದೆ.

ಇನ್ನು ಈ ಬಾರಿ ವಿನಯ್ ಹಾಗೂ ಕಾರ್ತಿಕ್ ಈ ಇಬ್ಬರದ್ದೂ ಪ್ರತ್ಯೇಕ ಗುಂಪುಗಳಿದ್ದು, ವಿನಯ್ ಗುಂಪಿನಲ್ಲಿ ನಮ್ರತಾ ಗೌಡ ಹಾಗೂ ಸ್ನೇಹಿತ್ ಸೇರಿಕೊಂಡರೆ, ಕಾರ್ತಿಕ್ ಗುಂಪಿನಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗುರುತಿಸಿಕೊಂಡಿದ್ದರು. ಅಲ್ಲದೇ ಕಾರ್ತಿಕ್ ಹಾಗೂ ಸಂಗೀತಾ ಶೃಂಗೇರಿ ಇಬ್ಬರನ್ನು ಒಳ್ಳೆಯ ಜೋಡಿ ಎಂದೂ ಸಹ ವೀಕ್ಷಕರು ಹೊಗಳುತ್ತಿದ್ದರು‌.

ಆದರೆ ಇತ್ತೀಚಿನ ಎಪಿಸೋಡ್ ಒಂದರಲ್ಲಿ ಸಂಗೀತ ಶೃಂಗೇರಿ ಕಾರ್ತಿಕ್ ಗುಂಪನ್ನು ಬಿಟ್ಟು ವಿನಯ್ ಗುಂಪನ್ನು ಸೇರಿಕೊಂಡಿದ್ದಾರೆ‌. ಅಲ್ಲದೇ ಕಾರ್ತಿಕ್ ತಲೆ ಬೋಳಿಸಿಕೊಳ್ಳಲು ಸಹ ಕಾರಣರಾಗಿದ್ದಾರೆ. ಸಂಗೀತ ಶೃಂಗೇರಿ ಅವರ ಈ ನಡೆ ವೀಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪರಿಣಾಮ ಸಾಮಾಜಿಕ ಜಾಲತಾಣದ ತುಂಬಾ ಸಂಗೀತಾ ಶೃಂಗೇರಿ ವಿರುದ್ಧ ಭಾರೀ ಪ್ರಮಾಣದ ನೆಗೆಟಿವ್ ಕಾಮೆಂಟ್ ಹರಿದಾಡುತ್ತಿವೆ.

ಅಲ್ಲದೇ ಸಂಗೀತಾ ಶೃಂಗೇರಿ ಇನ್ಸ್ಟಾಗ್ರಾಮ್ ಖಾತೆಯನ್ನು ಬರೋಬ್ಬರಿ‌ 10 ಸಾವಿರ ಜನ ಅನ್ ಫಾಲೋ ಮಾಡಿದ್ದಾರೆ. 449000 ಫಾಲೋವರ್ಸ್ ಹೊಂದಿದ್ದ ಸಂಗೀತ ಶೃಂಗೇರಿ ಈಗ 439000 ಫಾಲೋವರ್ಸ್ ಹೊಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!