Mysore
27
overcast clouds

Social Media

ಭಾನುವಾರ, 21 ಜೂನ್ 2026
Light
Dark

ಸಸ್ಯಾಹಾರಿ ಎಂದು ಜಾಹೀರಾತಿನಲ್ಲಿ ಚಿಕನ್‌ ತಿಂದ ರಶ್ಮಿಕಾ: ನೆಟ್ಟಿಗರಿಂದ ಟ್ರೋಲ್

ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರ ಬಗ್ಗೆ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ನಡೆಯುತ್ತಲೇ ಇರುತ್ತದೆ.

ಅನೇಕ ಬಾರಿ ಕೆಲವೊಂದು ವಿಷಯಕ್ಕೆ ಟ್ರೋಲ್‌ ಆಗಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕೆ ಅವರು ನೆಟ್ಟಿಗರ ಟ್ರೋಲ್‌ ಗೆ ಒಳಗಾಗಿದ್ದಾರೆ.

ʼಕಿರಿಕ್‌ ಪಾರ್ಟಿʼ ಬೆಡಗಿ ರಶ್ಮಿಕಾ ಮಂದಣ್ಣ ಹತ್ತಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಜನಪ್ರಿಯ ಬರ್ಗರ್‌ ಬ್ರ್ಯಾಂಡ್‌ ಆಗಿರುವ ಮೆಕ್‌ಡೊನಾಲ್ಡ್ ಅವರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ಅವರು ಪ್ರೈಡ್‌ ಚಿಕನ್‌ ತಿಂದಿದ್ದಾರೆ. ಒಟ್ಟಿನಲ್ಲಿ ಈ ಜಾಹೀರಾತು ಮೆಕ್‌ಡೊನಾಲ್ಡ್ ಬ್ರ್ಯಾಂಡ್‌ ಪ್ರಚಾರದ ಜಾಹೀರಾತಾಗಿದೆ.

ಆದರೆ ಚಿಕನ್‌ ತಿಂದದ್ದಕ್ಕೆ ರಶ್ಮಿಕಾ ಟ್ರೋಲ್‌ ಗೆ ಒಳಾಗಿದ್ದಾರೆ. ಅದಕ್ಕೆ ಕಾರಣ ಅವರ ಹಿಂದಿನ ಒಂದು ಮಾತು. ಈ ಹಿಂದೆ ರಶ್ಮಿಕಾ ಅವರು ತಾನು ಸಸ್ಯಾಹಾರಿ ಮತ್ತು ಸಸ್ಯಾಹಾರಿಗಳನ್ನು ಬೆಂಬಲಿಸುತ್ತೇನೆ ಎಂದಿದ್ದರು. ಈ ಮಾತನ್ನು ಹೇಳಿಯೂ ಅವರು ಚಿಕನ್‌ ತಿನ್ನುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

“ಇಲ್ಲಿ ಸಸ್ಯಾಹಾರಿ ರಶ್ಮಿಕಾ ಪ್ರೈಡ್‌ ಚಿಕನ್‌ ತಿನ್ನುತ್ತಿದ್ದಾರೆ. ಖ್ಯಾತನಾಮರು ಮತ್ತು ಅವರ ಬೂಟಾಟಿಕೆ” ಎಂದು ಬರೆದಿದ್ದಾರೆ. “ನಾವು ಕನ್ನಡಿಗರು ಅವಳನ್ನು ಏಕೆ ಇಷ್ಟಪಡುವುದಿಲ್ಲ ಎಂದು ಈಗಾದರೂ ಅರ್ಥಮಾಡಿಕೊಳ್ಳಿ. ಏಕೆಂದರೆ ಅವಳು ತನ್ನ ಮಾತುಗಳನ್ನು ಅಲ್ಲಿ ಮತ್ತು ಇಲ್ಲಿ ಅನೇಕ ಬಾರಿ ಬದಲಾಯಿಸುತ್ತಾಳೆ” ಎಂದು ಪೋಸ್ಟ್‌ನಲ್ಲಿ ಕಮೆಂಟ್‌ ಮಾಡಿದ್ದಾರೆ.

“ಇದು ನಕಲಿ ಚಿಕನ್‌ ಆಗಿರಬಹುದು ಆದರೆ ಹೌದು ಸಸ್ಯಾಹಾರಿಯಾಗಿದ್ದುಕೊಂಡು ಅವಳು ಈ ಜಾಹೀರಾತನ್ನು ಮಾಡಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಸದ್ಯ ರಶ್ಮಿಕಾ ಸಂದೀಪ್ ರೆಡ್ಡಿ ವಂಗ ಅವರ ʼ ಆ್ಯನಿಮಲ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!