ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕಾಟೇರ’ ಡಿಸೆಂಬರ್ 29ರಂದು ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಕೇವಲ ಮೂರೇ ದಿನದಲ್ಲಿ 50 ಕೋಟಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ.
‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಗಿ, ಮೊದಲ ದಿನವೇ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ಮೂಲಕ ರಿಲೀಸ್ ಆದ ಮೂರೇ ದಿನಕ್ಕೆ ಕಾಟೇರ ೫೮ ಕೋಟಿ ರೂಗಳ ಗಳಿಕೆ ಕಂಡಿದೆ.
ಈ ಚಿತ್ರದ ಮೂಲಕ ನಟ ದರ್ಶನ್ ಅವರಿಗೆ ಈ ಚಿತ್ರ ದೊಟ್ಟ ಯಶಸ್ಸು ನೀಡಿದೆ. ಈ ವರ್ಷದಲ್ಲಿ ಹಲವಾರು ಚಿತ್ರಗಳು ತೆರೆ ಕಂಡವು, ಕೆಲವೊಂದು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದವು. ಇದರ ನಡುವೆ ದರ್ಶನ್ ಅಭಿನಯದ ಕಾಟೇರ ಚಿತ್ರವು ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದ್ದು, ದರ್ಶನ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
‘ಕಾಟೇರ’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳಿದ್ದವು. ಈ ಸಿನಿಮಾದ ಟ್ರೇಲರ್ ನೋಡಿ ಜನರು ಮೆಚ್ಚಿಕೊಂಡಿದ್ದರು. ಈ ಚಿತ್ರದಲ್ಲಿ ದರ್ಶನ್ ಅವರು ಎರಡು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಜೀವನ, ಜಾತಿ ಪದ್ಧತಿ ಮತ್ತಿತ್ಯಾದಿ ವಿಚಾರಗಳ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ. ರಾಕ್ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ದರ್ಶನ್ಗೆ ಜೊತೆಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ.