ಬೆಂಗಳೂರು : ವರನಟ ಡಾ. ರಾಜ್ ಕುಮಾರ್ ಅಭಿನಯದ ಜೇಡರ ಬಲೆ ಸಿನಿಮಾವು ಮತ್ತೆ ಸುಮಾರು 54 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲಿದೆ, ಹೇಗಂತೀರಾ ಎಪ್ಪತ್ತರ ದಶಕಗಳ ಹಿಂದೆ ಹೆಸರುವಾಸಿಯಾದ ಸಿನಿಮಾಗಳ ಟೈಟಲ್ಗಳನ್ನು ಹೊಸ ಚಿತ್ರಗಳಿಗೆ ಮರುಬಳಕೆ ಮಾಡುವುದು ಇತೀಚಿನ ದಿನಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ.ಇಂರಹದ್ದೇ ಮಾದರಿಯಲ್ಲಿ ಇದೀಗ ಖ್ಯಾತ ನಿರ್ದೇಶಕ ದೊರೆ ಭಗವಾನ್ ನಿರ್ದೇಶನದಲ್ಲಿ, ನಟ ಸಾರ್ವಭೌಮ ಡಾ. ರಾಜ್ಕುಮಾರ್ ಹಾಗೂ ಜಯಂತಿ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಜೇಡರ ಬಲೆ ಸಿನಿಮಾದ ಹೆಸರನ್ನು ತೆಗೆದುಕೊಂಡು ಖ್ಯಾತ ಉದ್ಯಮಿ ವಿಕಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿದ್ವಿಕ್ ಪ್ರೊಡಕ್ಷನ್ ಎಂಬ ನೂತನ ನಿರ್ಮಾಣ ಸಂಸ್ಥೆಯ ಲಾಂಛನದಲ್ಲಿ ಜೇಡರಬಲೆ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಮಂಗಳವಾರ ರಜಾದಿನ ಚಿತ್ರ ನಿರ್ದೇಶಿಸಿದ್ದ ಯುವಿನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.