Mysore
23
drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಮೊದಲ ಲುಕ್ ನಲ್ಲಿಯೇ ಅಸ್ಪಷ್ಟವಾಗಿ ಕಾಣಿಸಿಕೊಂಡ ಅಜಿತ್ ಕುಮಾರ್ 61ನೇ ಸಿನಿಮಾ!

ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರ 61ನೇ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಯಾವ ಟೈಟಲ್ ಫೈನಲ್ ಆಗಲಿದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇತ್ತು. ಕೊನೆಗೂ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಚಿತ್ರಕ್ಕೆ ‘ತುನಿವು’ (Thunivu)ಎಂದು ಟೈಟಲ್ ಇಡಲಾಗಿದೆ. ಇದಕ್ಕೆ ಧೈರ್ಯ ಎಂಬರ್ಥ ಇದೆ. ಈ ಸಿನಿಮಾದ ಫಸ್ಟ್ ಪೋಸ್ಟರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಸಖತ್ ಮಾಸ್ ಆಗಿ ಮೂಡಿ ಬರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಅಜಿತ್ ಅವರು ಕುರ್ಚಿ ಮೇಲೆ ಕುಳಿತಿದ್ದಾರೆ. ಕೈಯಲ್ಲಿ ಅವರು ಗನ್ ಹಿಡಿದ್ದಾರೆ. ಫಸ್ಟ್ ಪೋಸ್ಟರ್ ಅಸ್ಪಷ್ಟವಾಗಿದೆ. ಒಟ್ಟಿನಲ್ಲಿ ಅಜಿತ್ ಅವರ ಲುಕ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಂತೂ ನಿಜ. ಈ ಚಿತ್ರಕ್ಕೆ ಮಲಯಾಳಂನ ಮಂಜು ವಾರಿಯರ್ ನಾಯಕಿ. ಅವರ ಪೋಸ್ಟರ್ ರಿಲೀಸ್ ಆಗಲಿ ಎಂದು ಮಂಜು ಫ್ಯಾನ್ಸ್ ಕಾಯುತ್ತಿದ್ದಾರೆ.

ಅಜಿತ್ ಅವರು ಈ ಮೊದಲು ‘ವಿವೇಗಮ್’, ‘ವೀರಮ್’ ಹಾಗೂ ‘ವಲಿಮೈ’ ಚಿತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಟೈಟಲ್ ರೀತಿಯಲ್ಲೇ ‘ತುನಿವು’ ಕೂಡ ಇದೆ. ಈ ಚಿತ್ರದಲ್ಲಿ ಅಜಿತ್ ಅವರ ಪಾತ್ರ ಯಾವ ರೀತಿಯಲ್ಲಿ ಸಾಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಗನ್ ಹಿಡಿದುಕೊಂಡಿರುವುದರಿಂದ ಅಜಿತ್ ಗ್ಯಾಂಗ್​ಸ್ಟರ್ ಪಾತ್ರ ಮಾಡುತ್ತಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ.

ಈ ಚಿತ್ರಕ್ಕೆ ಎಚ್​. ವಿನೋದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಜಿತ್ ಹಾಗೂ ವಿನೋದ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ‘ವಲಿಮೈ’ ಹಾಗೂ ‘ನೆರ್ಕೊಂಡ ಪಾರವೈ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಮೂರನೇ ಸಿನಿಮಾಗಾಗಿ ಒಂದಾಗುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ದ್ವಿಗುಣಗೊಂಡಿದೆ.

ಅಜಿತ್ ಅವರು ವಿಘ್ನೇಶ್​ ಶಿವನ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ವಿಚಾರವೂ ಸದ್ಯದ ಮಟ್ಟಿಗೆ ಗುಟ್ಟಾಗಿಯೇ ಇದೆ. ವಿಘ್ನೇಶ್​ ಶಿವನ್ ಅವರು ಇತ್ತೀಚೆಗೆ ನಟಿ ನಯನತಾರಾ ಜತೆ ಮದುವೆ ಆದರು. ಆ ಬಳಿಕ ಇಬ್ಬರೂ ವಿದೇಶ ಸುತ್ತಿ ಬಂದಿದ್ದಾರೆ. ಈಗ ವಿಘ್ನೇಶ್​ ಶಿವನ್ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ