Mysore
20
mist

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ನಮ್ಮ ಮೇಲಿನ ಅಭಿಮಾನಕ್ಕೆ ಜೀವಹಾನಿ ಮಾಡಿಕೊಳ್ಳಬೇಡಿ: ನಟ ಯಶ್‌

ಗದಗ: ರಾಕಿಂಗ್‌ ಸ್ಟಾರ್‌ ಯಶ್‌ ಹಟ್ಟು ಹಬ್ಬವನ್ನು ಸಂಭ್ರಮಿಸಲು ಬ್ಯಾನರ್‌ ಕಟ್ಟಲು ಹೋಗಿ ನಿಧನರಾದ ಗದಗ ಜಿಲ್ಲೆಯ ಸೂರಣಗಿ ಗ್ರಾಮದ ಯುವಕರ ಕುಟುಂಬವನ್ನು ಭೇಟಿಯಾಗಿ, ಅವರ ತಂದೆ-ತಾಯಿಗೆ ಸಾಂತ್ವಾನ ಹೇಳಿದ್ದಾರೆ.

ಇಂದು (ಸೋಮವಾರ) ಯಶ್‌ ಜನ್ಮ ದಿನವಾಗಿದ್ದು, ಅವರಿಗೆ ಶುಭ ಕೋರಲು ಸೂರಣಗಿ ಗ್ರಾಮದ ಯುವಕರು ಬ್ಯಾನರ್‌ ಕಟ್ಟುತ್ತಿದ್ದ ವೇಳೆ ವಿದ್ಯತ್‌ ಸ್ಪರ್ಶದಿಂದ ಮೃತಪಟ್ಟದ್ದರು. ಈ ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಕಿಂಗ್‌ ಸ್ಟಾರ್‌ ಯಶ್‌, ಮೃತ ಕುಟುಂಬದವರಗೆ ಸಾಂತ್ವಾನ ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಯಶ್‌, ಅಭಿಮಾನವನ್ನು ಬ್ಯಾನರ್‌ ಹಾಕಿ ಈ ರೀತಿ ವ್ಯಕ್ತಪಡಿಸಬೇಕು ಎಂಬುದನ್ನು ನಾವು ಯಾರು ಇಷ್ಟ ಪಡುವುದಿಲ್ಲ. ಪ್ರತೀ ವರ್ಷ ಹುಟ್ಟು ಹಬ್ಬ ಬಂದಾಗೆಲ್ಲಾ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ನಮಗೆ ಬರ್ತ್‌ಡೇ ಎಂದರೆ ಭಯವಾಗುತ್ತಿದೆ. ನನ್ನ ಬಗ್ಗೆ ನನಗೆ ಅಸಹ್ಯವಾಗಿದೆ. ಏನಿಕ್ಕೆ ಇದು. ಅಭಿಮಾನಿಗಳು ಎಲ್ಲಿದ್ದರೂ ಅಲ್ಲಿಂದಲೇ ಅರಸಿದರೇ ಅದುವೇ ನಮಗೆ ಸಾಕು. ಅದುವೇ ನಿಜವಾದ ಬರ್ತ್‌ಡೇ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ಅವರು ಹೇಳಿದ್ದಾರೆ.

ಅಭಿಮಾನವನ್ನು ಬ್ಯಾನರ್‌ ಕಟ್ಟುವುದು, ಬೈಕ್‌ ನಲ್ಲಿ ಚೇಸ್‌ ಮಾಡುವುದನ್ನು ಬಿಟ್ಟುಬಿಡಿ. ನನ್ನ ಬರ್ತ್‌ಡೇಯಿಂದ ಯಾರಿಗೂ ತೊಂದರೆಯಾಗಬಾರದು ಎಂದು ಈ ವರ್ಷ ಆಚರಣೆ ಮಾಡಬಾರದು ಎಂದು ನಿರ್ಧರಿಸಿದ್ದೆ. ಬೇಡ ಎಂದರೂ ಅಭಿಮಾನಿಗಳು ಬೇಜಾರ್‌ ಮಾಡಿಕೊಳ್ಳುತ್ತಾರೆ. ಈಗನ್ನು ಚಿಕ್ಕ ವಯಸ್ಸಿನ ಹುಡುಗರು? ಅವರ ಮನೆಗೆ ಯಾರು ಬೇಕಾದರೂ ಸಹಾಯ ಮಾಡಬಹುದು. ಆದರೆ ಮಗ ಮನೆಗೆ ಬರುತ್ತನಾ? ನಮ್ಮ ಮನೆಗಳಲ್ಲಿಯೂ ಸಾವಾದರು ಹಾಗೆಯೇ ಅಲ್ಲವೇ? ಎಂದು ಯಶ್‌ ವಿಷಾಧ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ನಿಜವಾಗಿಯೂ ಪ್ರೀತಿ ತೋರಿಸಬೇಕು ಎಂದರೆ, ಒಳ್ಳೆಯ ಕೆಲಸಗಳನ್ನು ಮಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರಿ ಅದುವೇ ಸಾಕು. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದುವೇ ಅವರು ನಮಗೆ ಅಭಿಮಾನ ತೋರಿಸಿದಂತೆ ಎಂದಿದ್ದಾರೆ ಯಶ್‌.

ಈ ಘಟನೆ ಬಳಿಕ ಪರಿಹಾರ ಘೋಷಣೆ ಮಾಡುವುದು ದೊಡ್ಡ ವಿಷಯವಲ್ಲ. ಮೃತರ ಕುಟುಂಬಕ್ಕೆ ಏನು ಅವಶ್ಯಕತೆಯಿದೆ ಅದನ್ನು ಮಾಡೋಣ. ನಾವು ಬಂದು ನೋಡುತ್ತಿರುವುದು ತಂದೆ-ತಾಯಿ ಮೇಲಿರುವ ಗೌರವಕ್ಕೆ. ಈ ಘಟನೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದಿದೆ. ನಮ್ಮ ಮೇಲೆ ಪ್ರೀತಿಯಿದ್ದರೆ ಜವಾಬ್ದಾರಿಂದ ನಡೆದುಕೊಳ್ಳಿ. ನಮ್ಮ ಮೇಲಿನ ಅಭಿಮಾನಕ್ಕೆ ಜೀವಹಾನಿ ಮಾಡಿಕೊಳ್ಳಬೇಡಿ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ಮನವಿ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!