Mysore
24
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ರಕ್ಕಮ್ಮ ಹಾಡಿನ ಮೂಲಕ ಎಲ್ಲರ ಮನಗೆದ್ದ ಜಾಕ್ವಲಿನ್‌ ವಿರುದ್ದ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಚಾರ್ಜ್‌ ಶೀಟ್‌ 

ಮುಂಬೈ: ವಿಕ್ರಾಂತ್‌ ರೋಣ ಸಿನೆಮಾ ಖ್ಯಾತಿಯ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ವಿರುದ್ಧ ರೂ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಜಾಕ್ವೆಲಿನ್‌ ಹೆಸರನ್ನು ಸೇರಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ.

ಪ್ರಭಾವಿ ರಾಜಕಾರಣಿಗಳ ಆಪ್ತ ಎಂಬ ಸೋಗಿನಲ್ಲಿ ಹಲವು ಮಂದಿಗೆ ವಂಚನೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ನ ಒಂದೊಂದೇ ಕರ್ಮಕಾಂಡಗಳು ಈಗ ಬಯಲಾಗುತ್ತಿವೆ. ತಾನು ಪ್ರಧಾನಿ ಕಚೇರಿಯ ಅಧಿಕಾರಿ ಎಂದು ನಂಬಿಸಿ ಜೈಲಲ್ಲೇ ಕುಳಿತು Ranbaxy ಕಂಪನಿಯ ಮಾಜಿ ಮಾಲೀಕ ಶಿವಿಂದರ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಬಳಿ ಬರೋಬ್ಬರಿ 200 ಕೋಟಿ ರು.ಗಳನ್ನು ಸುಕೇಶ್‌ ಸುಲಿಗೆ ಮಾಡಿದ್ದ ಎಂಬ ಸಂಗತಿ ಬೆಳಕಿಗೆ ಬಂದಿತ್ತು.

ಅ.22ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸುಕೇಶ್‌ ಹಾಗೂ ಅದಿತಿ ಸಿಂಗ್‌ ಅವರ ಸೋದರಿ ಅರುಂಧತಿ ಖನ್ನಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅದರ ವಿವರ ತನಗೆ ಲಭ್ಯವಾಗಿದೆ. 2020ರ ಜೂನ್‌ನಿಂದ 2021ರ ಮೇ ಅವಧಿಯಲ್ಲಿ ಈ ವಂಚನೆ ನಡೆದಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿತ್ತು.

ಶಿವಿಂದರ್‌ ಸಿಂಗ್‌ ಅವರು ಪ್ರಕರಣವೊಂದರ ಸಂಬಂಧ ಜೈಲಿನಲ್ಲಿದ್ದಾರೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಅದಿತಿ ಸಿಂಗ್‌ ಪ್ರಯತ್ನಿಸುತ್ತಿದ್ದಾರೆ. ಈ ವಿಷಯ ತಿಳಿದಿದ್ದ ಸುಕೇಶ್‌, ‘ಅಭಿನವ್‌’ ಎಂಬ ಹೆಸರಿನಲ್ಲಿ ಅದಿತಿ ಅವರನ್ನು ಪರಿಚಯಿಸಿಕೊಂಡಿದ್ದ. ತಾನು ಪ್ರಧಾನಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದೇನೆ. ಆದಾಯ ತೆರಿಗೆ, ಗುಪ್ತಚರ ದಳ ಹಾಗೂ ಕಾನೂನು ಇಲಾಖೆಗಳು ತನ್ನ ಅಧೀನಕ್ಕೆ ಬರುತ್ತವೆ. ಆಯ್ದ ಕುಟುಂಬಗಳ ಜತೆ ಮಾತನಾಡಲು ತನ್ನನ್ನು ನಿಯೋಜಿಸಲಾಗಿದೆ ಎಂದು ಹೇಳಿಕೊಂಡಿದ್ದ.

ಮೊಬೈಲ್‌ ಆ್ಯಪ್‌ ಹಾಗೂ ಧ್ವನಿ ಬದಲಿಸುವ ಸಾಫ್ಟ್‌ವೇರ್‌ಗಳನ್ನು ಬಳಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ತಾನೇ ಅದಿತಿ ಅವರ ಜತೆ ಮಾತನಾಡಿದ್ದ. ಈ ವೇಳೆ ನಾನೂ ಆತನ ಜತೆ ಮಾತನಾಡಿದ್ದೇನೆ. ಜೈಲಿನಲ್ಲೇ ಕುಳಿತು 200 ಕೋಟಿ ರೂ.ಗಳನ್ನು ಅದಿತಿ ಅವರಿಂದ ಆತ ವರ್ಗಾಯಿಸಿಕೊಂಡಿದ್ದ ಎಂದು ಅರುಂಧತಿ ಅವರು ವಿಚಾರಣೆ ವೇಳೆ ತಿಳಿಸಿದ್ದರು ಎಂದು ವರದಿ ಹೇಳಿತ್ತು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ