ಚಿರಂಜೀವಿ ಕುಟುಂಬದ ಮಗಳು ನಿಹಾರಿಕಾ ಕೊನಿಡೆಲಾ ಹಾಗೂ ವೆಂಕಟ್ ಚೈತನ್ಯ ಜೊನ್ನಲಗಡ್ಡ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಕಳೆದ ತಿಂಗಳು ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಪ್ರಕ್ರಿಯೆ ಮುಗಿದಿದ್ದು, ಇವರಿಗೆ ಡಿವೋರ್ಸ್ ಸಿಕ್ಕಿದೆ. ಇದು ಚಿರಂಜೀವಿ ಕುಟುಂಬದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೆವಿ ಪರಸ್ಪರ ಪ್ರೀತಿಸಿ ಮದುವೆ ಆದವರು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಇವರು 2020ರ ಡಿಸೆಂಬರ್ನಲ್ಲಿ ಉದಯಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು , ಆದರೆ ಮೂರು ವರ್ಷ ತುಂಬುವುದರೊಳಗೆ ನಿಹಾರಿಕಾ- ಚೈತನ್ಯ ಜೊನ್ನಲಗಡ್ಡ ದಾಂಪತ್ಯ ಬದುಕು ಅಂತ್ಯಗೊಂಡಿದ್ದು, ಈಗಾಗಲೇ ಇಬ್ಬರಿಗೂ ಕೌಟುಂಬಿಕ ನ್ಯಾಯಾಲಯವು ಡಿವೋರ್ಸ್‌ಗೆ ಮಂಜೂರು ನೀಡಿದೆ ಎನ್ನಲಾಗಿದೆ. ಆದರೆ ಈ ಡಿವೋರ್ಸ್‌ಗೆ ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ.
ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ನಿಹಾರಿಕಾ ಡಿವೋರ್ಸ್ ವಿಷಯವು ಸಾಕಷ್ಟು ಚರ್ಚೆ ಆಗಿತ್ತು. ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ನಿಹಾರಿಕಾ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಅತ್ತ ಚೈತನ್ಯ ಅವರ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಹಾರಿಕಾ ಜೊತೆಗಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಯು ಎಲ್ಲ ಕಡೆ ಹಬ್ಬಿಕೊಂಡಿತ್ತು. ಇದೀಗ ವದಂತಿ ನಿಜವಾಗಿದೆ.
ನಿಹಾರಿಕಾ ಅವರು ನಟನೆಯ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದರು. ವೆಬ್ ಸೀರಿಸ್ ಹಾಗೂ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದರು. ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಎಂದು ಈ ಬ್ಯಾನರ್ಗೆ ಅವರು ಹೆಸರಿಟ್ಟಿದ್ದಾರೆ. ಹೈದರಾಬಾದ್ನಲ್ಲಿ ಅವರು ಅದ್ದೂರಿ ಕಚೇರಿ ಕೂಡ ಆರಂಭಿಸಿದ್ದಾರೆ.