ಬೆಂಗಳೂರು : ನಟ ಉಪೇಂದ್ರ ಸಿನಿಮಾ ಮತ್ತು ರಾಜಕೀಯ ಅಂತಾ ಸಖತ್ ಬ್ಯುಸಿಯಾಗಿದ್ದಾರೆ. ಉಪೇಂದ್ರ ಅವರು ಕೆಲವು ದಿನಗಳ ಹಿಂದೆ ಕಬ್ಜ ಸಿನಿಮಾ ಮೂಲಕವಾಗಿ ಸುದ್ದಿಯಾಗಿದ್ದರು. ಇದೀಗ ಹೊಸ ಮನೆ ಗೃಹಪ್ರವೇಶ ಮಾಡಿದ್ದಾರೆ.
ಕತ್ರಿಗುಪ್ಪೆ ಏರಿಯಾದಲ್ಲಿ ಭವ್ಯವಾದ ಬಂಗಲೆ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ ಅವರು ಹೊಸ ಮನೆ ಖರೀದಿಸಿದ್ದಾರೆ.
ಸದಾಶಿವನಗರದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರ ಮನೆಗಳಿವೆ. ಹಾಗೂ ಅನೇಕ ರಾಜಕಾರಣಿಗಳ ನಿವಾಸಗಳು ಇದೇ ಏರಿಯಾದಲ್ಲಿವೆ. ಸ್ಯಾಂಕಿ ಟ್ಯಾಂಕ್ ಹತ್ತಿರದಲ್ಲೇ ಈ ನಿವಾಸವಿದ್ದು, ಶನಿವಾರ ಅಧಿಕೃತವಾಗಿ ಗೃಹಪ್ರವೇಶ ಮಾಡಿದ್ದಾರಂತೆ ಉಪ್ಪಿ ಮತ್ತು ಪ್ರಿಯಾಂಕಾ.





