Mysore
23
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಇನ್ಮುಂದೆ ಯಾರೂ ನನಗೆ ಹೆಣ್ಣು ಕೊಡುವುದಿಲ್ಲ: ಅಭಿಷೇಕ್‌ ಅಂಬರೀಶ್‌

ತಮ್ಮ ನಿಶ್ಚಿತಾರ್ಥ, ಮದುವೆ ಸುದ್ದಿಯ ಬಗ್ಗೆ ಅಭಿಷೇಕ್‌ ಅಂಬರೀಶ್‌ ಹೇಳಿದ್ದೇನು ?

ಮೈಸೂರು: ಹುಡುಗಿ ಯಾರೂ ಅಂತಾನೆ ನಂಗೆ ಗೊತ್ತಿಲ್ಲ, ಪ್ರತಿ ವರ್ಷ ನನಗೆ ಎಂಗೇಜ್ ಮೆಂಟ್ ಮಾಡಿಸ್ತೀರಾ, ನಿಮ್ಮ ಸುದ್ದಿ ನಂಬಿ ಮುಂದೆ ನನಗೆ ಯಾರು ಹೆಣ್ಣು ಕೊಡೊದಿಲ್ಲ… ಹೀಗೆಂದು ನಗೆ ಚಟಾಕಿ ಹಾರಿಸಿದವರು ನಟ ಅಭಿಷೇಕ್‌ ಅಂಬರೀಷ್.

ರೆಬಲ್ ಸ್ಟಾರ್ ಮತ್ತು ಸುಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಮದುವೆಗೆ ಸಜ್ಜಾಗಿದ್ದಾರೆ. ಡಿಸೆಂಬರ್‌ 11ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಅಂಬರೀಷ್‌ ಅವರ ೪ನೇ ಸಂಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಲತಾ ಅವರು ಮಗನ ನಿಶ್ಚಿತಾರ್ಥ ಸುದ್ದಿಯನ್ನು ನಿರಾಕರಿಸಿ “” ಕಳೆದ ಎರಡು ವರ್ಷಗಳಿಂದಲೂ ಇಂಥ ವದಂತಿ ಹರಡುತ್ತಲೇ ಇದೆ. ಡಿಸೆಂಬರ್​ನಲ್ಲಿ ನಿಶ್ಚಿತಾರ್ಥ ನಡೆಯುತ್ತದೆ ಎಂಬುದೆಲ್ಲ ಸುಳ್ಳು. ಆ ರೀತಿ ಯಾವುದೇ ಪ್ಲ್ಯಾನ್​ ಇಲ್ಲ, ಸದ್ಯ ಆತ ಸಿನಿಮಾದಲ್ಲಿ ಬ್ಯುಸಿ ಇದ್ದಾನೆʼʼ ಎಂದು ತಿಳಿಸಿದರು.

ಡಿಸೆಂಬರ್ 11ರಂದು ಅಭಿಷೇಕ್ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳು ಆಗಿದ್ದುಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ. ಮಾಡೆಲ್‌ ಲೋಕದ ಬೆಡಗಿಯನ್ನು ಅಭಿಷೇಕ್‌ ವರಿಸಲಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದವು. .

ತಮ್ಮ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್,ಕಳೆದ 15 ದಿನಗಳಿಂದ ನಾನು ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೀನಿ, ಇದರ ಮದ್ಯೆ ಹೇಗೆ, ನಾನು ಎಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿ ಎಂದು ಪ್ರಶ್ನಿಸುವ ಮೂಲತ ತಮ್ಮ ಮದುವೆ ಸಂಬಂಧ ಹರಡಿದ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಅಮರ್ ಸಿನಿಮಾ ನಂತರ ಅಭಿಷೇಕ್ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ. ” ಬ್ಯಾಡ್ ಮ್ಯಾನರ್ಸ್ʼ ಸಿನಿಮಾ ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ. ಈ ನಡುವೆ ಅಭಿಷೇಕ್‌ ಮುಂದಿನ ವಿಧಾನ ಸಭಾ ಚುನಾವಣೆಗೂ ಸ್ಪರ್ಧಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಸದ್ಯಕ್ಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಅವರೇ ಸ್ಪಷ್ಟಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!